ಸ್ಥಳೀಯ ಸುದ್ದಿಗಳು

ಮೆಗ್ಗಾನ್ ಅವ್ಯವಸ್ಥೆ ಕುರಿತು ಮೆಗ್ಗಾನ್ ಅಧೀಕ್ಷಕರಿಗೆ ಮನವಿ

ಸುದ್ದಿಲೈವ್.ಕಾಂ/ಶಿವಮೊಗ್ಗ

ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪೂರ್ಣೇಶ್ ಪ್ರತಿಭಟನೆ ಮೆಗ್ಗಾನ್ ಅಧೀಕ್ಷಕರಿಗೆ ಮತ್ತು ಜಿಲ್ಲಾ ಸರ್ಜನ್ ಗೆ ಮನವಿ ನೀಡುವುದರೊಂದಿಗೆ ಪ್ರತಿಭಟನೆ ಕೊನೆಗೊಂಡಿದೆ. ಡ್ಯೂಟಿ ಡಾಕ್ಟರ್ ಗಳಿಲ್ಲದೆ ಇರುವುದು, ವೀಲ್ ಚೇರ್ ನಲ್ಲಿಯೇ ಚಿಕಿತ್ಸೆ ನೀಡುವುದು ಸೇರಿ ಅವ್ಯವಸ್ಥೆಯ ವಿರುದ್ಧ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದರು.

ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ವೈದ್ಯರ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿದ್ದು ತುರ್ತು ಚಿಕಿತ್ಸೆಗಳ ಅವಶ್ಯಕತೆ ಇರುವ ರೋಗಿಗಳಿಗೆ ತಕ್ಷಣ ಮತ್ತು ಸಮರ್ಪಕವಾದ ಚಿಕಿತ್ಸೆ ದೊರೆಯುವಲ್ಲಿ ವಿಳಂಬವಾಗುತ್ತಿದೆ ಎಂದು ಪೂರ್ಣೇಶ್ ಆರೋಪಿಸಿದ್ದರು.

ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯೂ ಇದ್ದು ಇದನ್ನು ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಆಸ್ಪತ್ರೆಯ ಮುಖ್ಯ ವೈದ್ಯರನ್ನು ಒತ್ತಾಯಿಸಲಾಯಿತು. ಮನವಿ ಸ್ವೀಕರಿಸಿದ ಮೆಗ್ಗಾನ್ ಅಧೀಕ್ಷಕ ಶ್ರೀಧರ್ ಡ್ಯೂಟಿ ವೈದ್ಯರ ಬಗ್ಗೆ  ಸಿಸಿ ಟಿವಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಎನ್ ಎಸ್ ಯುಐ ಅಧ್ಯಕ್ಷರಾದ ವಿಜಯ್, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾದ ಯಮುನಾ ರಂಗೇಗೌಡರು ,ಮಹಾನಗರ ಪಾಲಿಕೆಯ ಸದಸ್ಯರಾದ ರಮೇಶ್ ಹೆಗ್ಡೆ ,ಕಾಂಗ್ರೆಸ್ ಮುಖಂಡರಾದ ಅಮರಪಲ್ಲಿ ಸುರೇಶ್, ಗಿರೀಶ್ ಯುವ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಯುವ ಮುಖಂಡರಾದ ಮಧುಸೂದನ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಘವೇಂದ್ರ,ಅಮರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೂರ್ಣೇಶ್,ಅಬ್ದುಲ್ ಸತ್ತಾರ್ ,ಮಲವಗೊಪ್ಪ ಶಿವು , Nsui ರವಿ ಕಾಟಿಕೆರೆ ,ವೆಂಕಟೇಶ್ ,ಪ್ರಸನ್ನ ಹಾಗೂ ಉಪಸ್ಥಿತರಿದ್ದರು

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button