ಕುಂಭಕರ್ಣ ನಿದ್ದೆಗೆ ಜಾರಿದ ಅಧಿಕಾರಿಗಳನ್ನ ಎದ್ದೇಳಿಸುವವರು ಯಾರು?

ಸುದ್ದಿಲೈವ್. ಕಾಂ/ಶಿವಮೊಗ್ಗ
ಅಧಿಕಾರಿಗಳ ನಿರ್ಲಕ್ಷಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ. ಕಳೆದ ಒಂದು ವಾರದ ಹಿಂದೆ ಗಾಳಿ ಮತ್ತು ಮಳೆಗೆ ಮರದ ಕೊಂಬೆ ಒಂದು ಶಾಲೆಯ ಆವರಣದಲ್ಲಿ ಧರೆಗೆ ಉರುಳಿದೆ. ಕಳೆದ ಒಂದು ವಾರದಿಂದ ಧರೆಗೆ ಉರುಳಿದ ಮರದ ಕೊಂಬೆಯನ್ನ ತೆರವುಗೊಳಿಸುವಷ್ಟು ಸಹ ಇಲ್ಲಿನ ಅಧಿಕಾರಿಗಳಿಗೆ ಪುರುಸೊತ್ತಿಲ್ಲದಂತಾಗಿದೆ.
ಇಲ್ಲಿನ ಲಷ್ಕರ್ ಮೊಹಲ್ಲಾದಲ್ಲಿರುವ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆಯಲ್ಲಿ ಕಳೆದ ಒಂದುವಾರದ ಹಿಂದೆ ಮಳೆಗಾಳಿಗೆ ಮರದ ಕೊಂಬೆ ಧರೆಗೆ ಉರುಳಿದೆ. ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವುದರಿಂದ ಕಳೆದ ಒಂದು ವಾರದಿಂದ ಈ ಶಾಲೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಶಾಲೆಯ ಮುಖ್ಯೋಪಧ್ಯಾಯರು ಮೆಸ್ಕಾಂಗೆ ಸಂಪರ್ಕಿಸಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸರಿಪಡಿಸಿಕೊಡಿ ಎಂದು ಕೇಳಿದ್ದಾರೆ. ಆದರೆ ಮೆಸ್ಕಾಂ ಮರವನ್ನ ತೆರವುಗೊಳಿಸಿಕೊಡಿ ವಿದ್ಯುತ್ ಸಂಪರ್ಕ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಹಾಗಾದರೆ ಈ ಮರದ ಕೊಂಬೆಯನ್ನ ತೆರವುಗೊಳಿಸುವವರು ಯಾರು ಎಂಬುದು ಪ್ರಶ್ನೆಯಾಗಿದೆ. ಈ ಶಾಲೆ ಶಿಕ್ಷಣ ಇಲಾಖೆ ಅಡಿ ಬಾರದೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿ ಬರುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿಕೊಡಬೇಕು. ಒಂದು ವೇಳೆ ಶಾಲೆಯವರು ತೆರವುಗೊಳಿಸಿದರೆ ಮರ ತೆರವುಗೊಳಿಸಿದ ಕಾರಣ ಅರಣ್ಯ ಇಲಾಖೆ ನೋಟೀಸ್ ನೀಡುವುದರಿಂದ ಶಾಲೆಯವರು ತೆರವುಗೊಳಿಸಿಲ್ಲ.
ಶಾಲೆ ರಜೆ ಇರುವುದರಿಂದ ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲ. ಆದರೆ ಕಳೆದ ಒಂದುವಾರದಿಂದ ಶಾಲೆಯಲ್ಲಿ ಶಿಕ್ಷಕಿಯರ ಹಾಗೂ ಬೋಧಕೇತರ ಸಿಬ್ಬಂದಿಗಳು ಕೆಲಸ ಮಾಡುತ್ತಾರೆ. ಅವರಿಗೂ ಈ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ಸಮಸ್ಯೆಯಾಗುತ್ತಿದೆ. ಈ ಕುಂಬಕರ್ಣ ಅರಣ್ಯ ಇಲಾಖೆಯನ್ನ ನಿದ್ದೆಯಿಂದ ಏಳಿಸುವವರು ಯಾರು? ಎಂಬುದೆ ಕಟ್ಟಕಡೆಯ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಲಿದೆ.
