ಸ್ಥಳೀಯ ಸುದ್ದಿಗಳು

ರಾತ್ರೋ ರಾತ್ರಿ ಮೆಗ್ಗಾನ್ ಮುಂದೆ ಪೂರ್ಣೇಶ್ ಧರಣಿ

ಸುದ್ದಿಲೈವ್.ಕಾಂ/ಶಿವಮೊಗ್ಗ

ಮೆಗ್ಗಾನ್ ಅವ್ಯವಸ್ಥೆಯ ವಿರುದ್ಧ ತೀರ್ಥಹಳ್ಳಿಯ ಯುವ ಕಾಂಗ್ರೆಸ್ ನ ಮುಖಂಡ ಪೂರ್ಣೇಶ್ ಏಕಾಂಗಿ ಹೋರಾಟಕ್ಕೆ ಕುಳಿತಿದ್ದಾರೆ. ಮಧ್ಯರಾತ್ರಿಯಿಂದ ನಡೆಯುತ್ತಿರುವ ಧರಣಿಗೆ ಮೆಗ್ಗಾನ್ ಆಡಳಿತ ಮಂಡಳಿ ಸೌಜನ್ಯಕ್ಕಾದರೂ ಬಂದು ಮಾತನಾಡಿಸಲಿಲ್ಲವೆಂದು ಪೂರ್ಣೇಶ್ ಆರೋಪಿಸಿದ್ದಾರೆ.

ಹಾಗಾದರೆ ಸೌಜನ್ಯತೆ,ಸೂಕ್ಷ್ಮತೆ ಎಲ್ಲಾವನ್ನೂ ಮೆಗ್ಗಾನ್ ಕಳೆದುಕೊಂಡು ಬಿಟ್ಟಿದ್ದಯಾ ಎಂಬ ಭಾವನೆ ಓದುಗರಲ್ಲಿ ಮೂಡಿದರೆ ಅತಿಶಯೋಕ್ತಿನೇ. ಏಕೆಂದರೆ ಇಂತಹ ಸೂಕ್ಷ್ಮೆತೆಗಳಿಗೆ ಎಂದೋ ಎಳ್ಳುನೀರು ಬಿಡಲಾಗಿದೆ.

ಘಟನೆ ಏನು?

ತೀರ್ಥಹಳ್ಳಿಯ ಕೆಳಕೆರೆಯಲ್ಲಿ ಪ್ರವೀಣ್ ಎಂಬ ಯುವಕನ ಮೇಲೆ ರಾಡಿನಿಂದ ದಾಳಿ ಮಾಡಲಾಗುತ್ತದೆ. ರಾಡಿನ ಹೊಡೆತ ಪ್ರವೀಣ್ ನ  ತಲೆಗೆ ಢಾಳವಾಗಿ ಬಿದ್ದ ಕಾರಣ ಅಧಿಕ ರಕ್ತ ಹರಿದಿದೆ. ತೀರ್ಥಹಳ್ಳಿ ಜೆ.ಸಿ ಆಸ್ಪತ್ರೆಯವರು ಮೆಗ್ಗಾನ್ ಗೆ ಕರೆದುಕೊಂಡು ಹೋಗಿ ಎಂದು ಸೂಚಿಸಿದ ಮೇರೆಗೆ ಆತನನ್ನ ಮೆಗ್ಗಾನ್ ಗೆ ಕರೆತರಲಾಗುತ್ತದೆ.

ತಡರಾತ್ರಿ 1 ಗಂಟೆಗೆ ಮೆಗ್ಗಾನ್ ಗೆ ಪ್ರವೀಣರನ್ನ ಕರೆತರಲಾಗಿದೆ. ಪ್ರವೀಣ್ ಗೆ ತುರ್ತು ವಿಭಾಗದಲ್ಲಿ ವೀಲ್ ಚೇರ್ ನಲ್ಲಿ ಕರೆದುಕೊಂಡು ಬಂದರೆ ಸುಮಾರು ಎರಡು ಗಂಟೆಗೆಳ ಕಾಲ ಆತನನ್ನ ವೀಲ್ ಚೇರ್ ಮೇಲೆಯೇ ಕೂರಿಸಲಾಗಿದೆ. ತುರ್ತುವಿಭಾಗದಲ್ಲಿ ಪಾಪ ಯುವಕನಿಗೆ ಬೆಡ್ ಇಲ್ಲವಾಗಿದೆ.

ಎರಡು ಗಂಟೆಗಳ ಕಾಲ ಕುಳಿತ ಪ್ರವೀಣ್ ವೀಲ್ ಚೇರ್ ಮೇಲೆಯೇ ನೋವಿನಲ್ಲಿಯೇ ಬಳಲಿ ನಿದ್ದೆಗೆ ಜಾರಿದ್ದಾರೆ. ಅದೇವೇಳೆಗೆ ಪೂರ್ಣೇಶ್ ಸ್ಥಳಕ್ಕೆ ಬಂದಿದ್ದಾರೆ. ಪೂರ್ಣೇಶ್ ಬಂದ ನಂತರವೂ ಚಿಕಿತ್ಸೆ ನೀಡೋದು ಇರಲಿ ಬೆಡ್ ಸಿಗಲಿಲ್ಲ.

ಕೊಠಡಿಯಲ್ಲಿ ಬೆಡ್ಡೇ ಇಲ್ಲ

ತದನಂತರ ಕೊಠಡಿಗೆ ಹೋಗಿ ಎಂದು ಕೊಠಡಿಯನ್ನ ಸೂಚಿಸಿದ್ದಾರೆ. ಕೊಠಡಿಯಲ್ಲಿ ಬೆಡ್ಡೇ ಇಲ್ಲವೆಂದು ಪೂರ್ಣೇಶ್ ಆರೋಪಿಸಿದ್ದಾರೆ. ಹೋಗಲಿ ಡ್ಯೂಟಿ ಡಾಕ್ಟರ್ ಎಲ್ಲಿ ಎಂದು ಕೇಳಿದ್ದಾರೆ.

ಅದಕ್ಕೂ ನೋ ರೆಸ್ಪಾನ್ಸ್, ಕೇವಲ ಮೆಡಿಕಲ್ ವಿದ್ಯಾರ್ಥಿಗಳಿಗೆ ಇಲ್ಲಿ ಚಾರ್ಜ್ ಕೊಟ್ಟು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಇದನ್ನ ವಿರೋಧಿಸಿ ಪೂರ್ಣೇಶ್ ದಿಡೀರ್ ನೇ ರಾತ್ರಿಯ ವೇಳೆ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ಕುಳಿತಿದ್ದಾರೆ.

ಎಚ್ಚೆತ್ತುಕೊಳ್ಳದ ಮೆಗ್ಗಾನ್

ಬಡವರ ಆರೋಗ್ಯ ಕಾಪಾಡಬೇಕಾದ ಮೆಗ್ಗಾನ್ ಬಡವರ ರಕ್ತ ಹೀರುವ ಕೇಂದ್ರವಾಗಿಬಿಟ್ಟಿದೆ ಎಂದು ಪೂರ್ಣೇಶ್ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮೊನ್ನೆ ತಾನೆ ಗೃಹಸಚಿವರು ಕಾರ್ಯಕ್ರಮದಲ್ಲಿ ಅವ್ಯವಸ್ಥೆಯನ್ನ ಬಹಿರಂಗಗೊಳಿಸಿದರು ಮೆಗ್ಗಾನ್ ಎಚ್ಚೆತ್ತುಕೊಂಡಿಲ್ಲ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button