ಸುದ್ದಿ

ಗೃಹಸಚಿವರ ನಾಡಲ್ಲೇ ದಲಿತರ ಮೇಲೆ ದೌರ್ಜನ್ಯ

ಗೃಹಸಚಿವರ ಗ್ರಾಮದಲ್ಲಿಯೇ ದಲಿತ ದಂಪತಿಗಳ ಮೇಲೆ ಕೆಲ ಕಿಡಿಗೇಡಿಗಳು ಅಡ್ಡಕಟ್ಟಿ ಥಳಿಸಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ನಡೆಸಿರುವ ಘಟನೆ ನಡೆದಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರರ ತವರು ಕ್ಷೇತ್ರದಲ್ಲಿ ಕಳ್ಳತನ ದರೋಡೆ ಪ್ರಕರಣಗಳು ನಡೆದ ಬೆನ್ನಲ್ಲೇ ಈಗ ದುಷ್ಕರ್ಮಿಗಳು ಅತ್ಯಾಚಾರ ಮಾಡುವ ಯತ್ನಕ್ಕೂ ಕೈ ಹಾಕಿದ್ದಾರೆ ಎಂದರೆ…ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ ಎಂಬ ಪ್ರಶ್ನೆ ಮೂಡದೆ ಇರದು.

ಈ ಘಟನೆ ನಿನ್ನೆ ಸಂಜೆ ನಡೆದಿದೆ. ದಲಿತ ಮಹಿಳೆಯ ದೂರಿನ‌ಪ್ರಕಾರ ನಾನು ಮತ್ತು ನನ್ನ ಗಂಡ ಆರಗಾ ಗ್ರಾದ ಹರಿಜನ ಕಾಲೋನಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದೇವೆ. ನಾನು ಹೊಸನಗರ ತಾಲೂಕು ತೋಟದ ಮನೆ ಕೆಸಿನಒಡ್ಡು ಗ್ರಾಮದ ನಿವಾಸಿಯಾಗಿದ್ದು ನಾಲ್ಕು ವರ್ಷದ ಹಿಂದೆ ದೇವೇಂದ್ರ ಅವರನ್ನು ವಿವಾಹವಾಗಿರುತ್ತೇನೆ.

ನಮಗೆ ಆರೋಗ್ಯ ಸಮಸ್ಯೆ ಇದ್ದು ನಮ್ಮಿಬ್ಬರಿಗೆ ಈವರೆವಿಗೆ ಮಕ್ಕಳು ಆಗಿರುವುದಿಲ್ಲ, ನನ್ನ ಅನಾರೋಗ್ಯದ ಬಗ್ಗೆ ಆರಗದಲ್ಲಿರುವ ಸರ್ಕಾರಿ ವೈದ್ಯರಾದ ಡಾಕ್ಟರ್ ತೇಜಸ್ವಿಯವರು ಚಿಕಿತ್ಸೆ ನೀಡುತ್ತಿರುತ್ತಾರೆ, ದಿನಾಂಕ 01-01-2022 ರಂದು ಸಂಜೆ 7 ಗಂಟೆಗೆ ನನಗೆ ಆರೋಗ್ಯ ಸಮಸ್ಯೆ ಹೆಚ್ಚಾದ ಕಾರಣ ನನ್ನ ಗ೦ಡ ದೇವೆಂದ್ರ ಇವರನ್ನು ಕರೆದುಕೊಂಡು ಆರಗಾ ಆಸ್ಪತ್ರೆಗೆ ಬಂದಿರುತ್ತೇವೆ.

ಅಲ್ಲಿ ವೈದ್ಯರು ಲಭ್ಯ ಇಲ್ಲದ ಕಾರಣ ತೀರ್ಥಹಳ್ಳಿಗೆ ಬಂದು ಪರಿಚಿತ ವೈದ್ಯರನ್ನು ಸಂಪರ್ಕಿಸಲು ಪ್ರಯಸ್ನಿಸುತ್ತೇವೆ. ಅವರುಸಿಗದಿರುವ ಕಾರಣ ಹಳೆ ಚೀಟಿ ತೋರಿಸಿ ಔಷಧಿ ಖರೀದಿಸಿ ಬಸ್ಸಿನಲಲಿ ಆರಗಾ ಕ್ಕೆ ಬಂದಿರುತ್ತೆವೆ. ರಾತ್ರಿ ಸುಮಾರು 9 ಗಂಟೆ ಸಮಯ ಆಗಿರುತ್ತದೆ, ಅರಗ ಗೇಟ್‌ನಲ್ಲಿ ಬಸ್ ಇಳಿದು ಹಾಗೆ ನಡೆದುಕೊಂಡು ಹೋಗುತ್ತಿದ್ದಾಗ, ಆರಗಾ ಗೇಟ್ ನಿಂದ ಅರೆಆರಗಾ ಊರಿನ ನಡುವೆ ಮಸೀದಿ ಹತ್ತಿರ ಏಕಾಏಕಿ ದೇವರಗುಡಿ ನಿವಾಸಿಗಳಾದ ಸಂಪತ್,ಬಿನ್ ಉಮೇಶ್‌ಗೌಡ, ಆದರ್ಶ ಬಿನ್ ಪಟ್ಟಪ್ಪಗೌಡ ಮತ್ತು ಅವರ ಜೊತೆ ಇಬ್ಬರು ನನಗೆ ಅವರ ಪರಿಚಯ ಇರುವುದಿಲ್ಲ. ಇವರುಗಳು ನಮ್ಮನ್ನು ಅಡ್ಡಗಟ್ಟಿ ನನ್ನ ಗಂಡ ದೇವೆಂದ್ರ ಇವರಿಗೆ ಮುಖ, ಸೊಂಟ, ಕಾಲುಗಳಿಗೆ ಹಲ್ಲೆ ಮಾಡಿ ರಕ್ತ ಗಾಯ ಮಾಡಿರುತ್ತಾರೆ.

ಬಿಡಿಸಲು ಹೋದ ನನ್ನನ್ನು ಕೈ ಹಿಡಿದು ಎಳೆದು ನಾಲ್ಕು ಜನಸೇರಿ ಪಕ್ಕದ ಪಕ್ಕದ ರಬ್ಬರ್ ಪ್ಲಾಂಟೇಷನ್ ಗೆ ಎಳೆದುಕೊಂಡು ಹೋಗಿ ನನ್ನ ಉಡುಪನ್ನು ಬಲವಂತವಾಗಿ ಕಿತ್ತುಹಾಕಿ ಬೆತ್ತಲೆ ಗೊಳಿಸಿದ್ದಾರೆ ನನ್ನ ಗಂಡನಿಗೆ ವಿಪರೀತ ಐಟು ಬಿದ್ದಿದ್ದರಿಂದ ಅವರು ರಸ್ತೆ ಬದಿ ಎಚ್ಚರ ತಪ್ಪಿ ಬಿದ್ದಿದ್ದರಿಂದ ನನ್ನ ರಕ್ಷಣೆಗೆ ಬರಲು ಸಾದ್ಯವಾಗಲಿಲ್ಲ.

ನಾನು ಜೋರಾಗಿ ಕೂಗಿ ಕೊಂಡಾಗ ಸದರಿ ಸಂಪತ್, ಆದರ್ಶ. ಇನ್ನು ಒಬ್ಬರು ನನ್ನ ಅಂಗಾಂಗಗಳಿಗೆ ಅಸಭ್ಯವಾಗಿ ಸ್ಪರ್ಷಿಸಿ ಅತ್ಯಾಚಾರಕ್ಕೆ ಪ್ರಯತ್ನಿಸಿರುತ್ತಾರೆ, ಪುನಃ ನಾನು ಕಿರುಚಿ ಕೊಂಡಾಗ ನನ್ನ ಗಂಡ ಎಚ್ಚರಗೊಂಡು ನನ್ನ ಹೆಂಡತಿಗೆ ಅತ್ಯಚಾರ ಮಾಡುತ್ತಾರೆ, ಯಾರಾದರೂ ಬನ್ನಿ ರಕ್ಷಿಸಿ ಅಂತ ಕೂಗಿ ಕೊಂಡಾಗ ಈ ವ್ಯಕ್ತಿಗಳು ನನ್ನನ್ನು ಬಿಟ್ಟು ಓಡಿ ಹೋಗಿರುತ್ತಾರೆ. ಈ ದಿನ ಉಳಿದುಕೊಂಡೆ ನಿನ್ನನ್ನು ಅತ್ಯಾಚಾರ ಮಾಡದೆ ಬಿಡುವುದಿಲ್ಲ. ಅಂತ ಬೆದರಿಕೆ ಹಾಕಿ ಹೋಗಿರುತ್ತಾರೆ.

ಜೀವ ಭಯದಿಂದ ತತ್ತರಿಸಿ ಹೋಗಿದ್ದ ನಮ್ಮನ್ನು ಸ್ಥಳಿಯರಾದ ಚಂದ್ರ, ದಿನೇಶ ಇವರುಗಳು ರಕ್ಷಣೆ ಮಾಡಿ, ರಿಕ್ಷಾದಲ್ಲಿ ಮನೆಗೆ ಕಳುಹಿಸಿ ಕೊಟ್ಟಿರುತ್ತಾರೆ. ನನ್ನ ಒಳ ಉಡುಪು, ಚೂಡಿದಾರದ ಪ್ಯಾಂಟ್ ಸ್ಥಳದಲ್ಲಿ ಕಳಚಿ ಬಿದ್ದಿದ್ದು ನಾನು ಮಾನ ರಕ್ಷಣೆಗಾಗಿ ವೇಲನ್ನು ಅಡ್ಡ ಉಟ್ಟುಕೊಂಡು ಮನೆಗೆ ಬಂದಿರುತ್ತೇನೆ, ನಮಗಾದ ಅವಮಾನ ಮತ್ತು ಹಲ್ಲೆಯಿಂದ ದೈಹಿಕ ಮಾನಸಿಕ ಹಿಂಸೆಗೆ ಒಳಗಾಗಿ ಆ ದಿನ ರಾತ್ರಿ ಮನೆಯಲ್ಲೇ ಕಳೆದು ದಿನಾಂಕ 10-05-2022 ರಂದು ತೀರ್ಥಹಳ್ಳಿ ಜಿ.ಸಿ.ಅಸ್ಪತ್ರೆಗೆ ನಮ್ಮನ್ನು ಸಂಬಂಧಿಗಳು ದಾಖಲು ಮಾಡಿರುತ್ತಾರೆ. ಗಂಡ ಹೆಂಡತಿ ನಾವಿಬ್ಬರು, ಚಿಕಿತ್ಸೆ ಪಡೆದು ಈ ದಿನ ಈ ದೂರನ್ನು ಲಿಖಿತವಾಗಿ ನೀಡುತ್ತಿದ್ದೇನೆ.

ನನ್ನನ್ನು ಮೇಲ್ಕಂಡ ವ್ಯಕ್ತಿಗಳು ಎಳೆದುಕೊಂಡು ಹೋಗುವಾಗ ನನ್ನ ಎಡ ಭಾಗದ ತೊಡೆಯು ತರಚಿ ರಕ್ತ ಗಾಯವಾಗಿರುತ್ತದೆ. ನಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಪರಿಶಿಷ್ಟರಾದ ನಮಗೆ ಸೂಕ್ತ ರಕ್ಷಣೆ ನೀಡಿ ಮೇಲ್ಕಂಡ ದೌರ್ಜನ್ಯ ನಡೆಸಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕಾಗಿ ಪ್ರಾರ್ಥನೆ ಎಂದು ಸಂತ್ರಸ್ಥ ಮಹಿಳೆ ನ್ಯಾಯಕ್ಕಾಗಿ ಅವಲೊತ್ತುಕೊಂಡಿದ್ದಾಳೆ.

ECOSYSTEM

Positive growth.

Nature, in the common sense, refers to essences unchanged by man; space, the air, the river, the leaf. Art is applied to the mixture of his will with the same things, as in a house, a canal, a statue, a picture. But his operations taken together are so insignificant, a little chipping, baking, patching, and washing, that in an impression so grand as that of the world on the human mind, they do not vary the result.

The sun setting through a dense forest.
Wind turbines standing on a grassy plain, against a blue sky.
The sun shining over a ridge leading down into the shore. In the distance, a car drives down a road.

Undoubtedly we have no questions to ask which are unanswerable. We must trust the perfection of the creation so far, as to believe that whatever curiosity the order of things has awakened in our minds, the order of things can satisfy. Every man’s condition is a solution in hieroglyphic to those inquiries he would put.

 

ಗೃಹಸಚಿವರ ಕ್ಷೇತ್ರದಲ್ಲಿ ದಲಿತರ ಮೇಲೆ ದೌ್ಜನ್ಯ

 

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button