ಅತ್ಯಾಚಾರ ನಡೆಸಲು ಬಂದವನು ಪೊಲೀಸರ ಅತಿಥಿಯಾದನಾ?

ಸುದ್ದಿಲೈವ್.ಕಾಂ/ಶಿವಮೊಗ್ಗ
ಯುವತಿಯಿಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ವ್ಯಕ್ತಿ ರೇಪ್ ಮಾಡಲು ಯತ್ನಿಸಿದ ಆರೋಪದ ಅಡಿ ಸ್ಥಳೀಯರೇ ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ವಾದಿ-ಏ-ಹುದಾ ಬಡಾವಣೆಯಲ್ಲಿ ಆರೀಪ್ ಎಂಬ ವ್ಯಕ್ತಿ ಯುವತಿಯೊಂದಿಗೆ ಅನೈತಿಕ ಸಂಬಂಧವನ್ನ ಇಟ್ಟುಕೊಂಡಿದ್ದ, ಆರೀಪ್ ವಿವಾಹಿತನಾಗಿ ಮಗುವನ್ನ ಹೊಂದಿದ್ದನು. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನ ನಿನ್ನೆ ಆರೀಫ್ ರೇಪ್ ಮಾಡಲು ಬಂದಿದ್ದನು ಎಂದು ಆರೋಪಿಸಿ ಆತನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ನಿನ್ನೆ ಯುವತಿಯ ತಂದೆ ತಾಯಿ ಅಂಗಡಿಯಲ್ಲಿ ಇದ್ದಾಗ ಮನೆಯ ಹಿಂಬದಿಯಿಂದ ಬಂದು ಮಹಿಳೆಯನ್ನ ಅತ್ಯಾಚಾರ ವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೀಫ್ ನು ಹೆಂಡತಿ ಮಗುವನ್ನ ಬಿಟ್ಟು ಯುವತಿಯನ್ನ ಮದುವೆಯಾಗುವುದಾಗಿ ಭರವಸೆ ನೀಡಿದ್ದನು ಎಂದು ಯುವತಿಯ ತಂದೆ ತಾಯಿ ಆರೋಪಿಸಿದ್ದಾರೆ.
ಈ ಘಟನೆಯು ಎಫ್ಐಆರ್ ಆಗಿಲ್ಲ. ಕಾಂಪ್ರಮೈಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕಾಂಪ್ರಮೈಸ್ ಆಗದಿದ್ದರೆ ಎಫ್ಐಆರ್ ಮಾಡುವುದಾಗಿ ಯುವತಿ ಮನೆಯವರು ಹೇಳಿದ್ದಾರೆ.
