ಸುದ್ದಿಲೈವ್.ಕಾಂ/ಭದ್ರಾವತಿ

ಭದ್ರಾವತಿ ವೀರಾಪುರ ಗ್ರಾಮದಲ್ಲಿ ಗೋಂದಿ ಬಲದಂಡೆ ನಾಲೆಯ ಶಿಥಿಲಗೊಂಡ ಸೇತುವೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೆಕ್ಷನ್ ಬೀಮ್ ಗರ್ಡರ್ ನ್ನ ಕದ್ದುಕೊಂಡು ಹೋಗಿರುವ ಬಗ್ಗೆ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್ ದೂರು ದಾಖಲಿಸಿದ್ದಾರೆ.

15 ವರ್ಷದ ಹಿಂದೆ ನಿರ್ಮಿಸಲಾಗಿದ್ದ ಸೇತುವೆಗೆ ಈ ಸೆಕ್ಷನ್ ಬೀಮ್ ಗರ್ಡರ್ ನ್ನ ಅಳವಡಿಸಿ ನಿರ್ಮಿಸಲಾಗಿತ್ತು. ಆದರೆ ಒಂದು ವರ್ಷದ ಕೆಳಗೆ ಹಳೆ ಸೇತುವೆಯನ್ನ ಒಡೆದು ಹೊಸ ಸೇತುವೆ ನಿರ್ಮಿಸಲಾಗಿತ್ತು.

ಈ ಸಂದರ್ಭದಲ್ಲಿ ಸೇತುವೆಗೆ ಅಳವಡಿಸಿದ ಸೆಕ್ಷನ್ ಬೀಮ್ ಗರ್ಡರ್ ನ್ನ ಪಕ್ಷದ ರಸ್ತೆಯ ಬದಿ ಇರಿಸಿ ದಿನ ಗಸ್ತು ವೇಳೆ ಗರ್ಡರ್ ನ್ನ ಸುರಕ್ಷತೆ ಮಾಡಲಾಗಿತ್ತು. ನ.23 ರಂದು ಗಸ್ತು ತಿರುಗುವಾಗ ಇದ್ದ ಈ ಗರ್ಡರ್ ನ್ನ ಯಾರೋ ಕಳ್ಳರು ನ.24 ರಂದು ಕದ್ದಯ್ದೊರುವುದಾಗಿ ಇಲಾಖೆಯ ಎಇಇ ಇಂಜಿನಿಯರ್ ಮಂಜುನಾಥ್ ದೂರು ದಾಖಲಿಸಿದ್ದಾರೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here