ಸುದ್ದಿಲೈವ್.ಕಾಂ/ಶಿವಮೊಗ್ಗ

ಎಂಎಲ್ ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಇಬ್ವರು ಅಭ್ಯರ್ಥಿಗಳಿದ್ದು ಸಿಟ್ಟಿಂಗ್ ಎಂಎಲ್ ಸಿ ಪ್ರಸನ್ನಕುಮಾರ್ ಗೆ ಅವಕಾಶ ಕೊಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈ.ಹೆಚ್ ನಾಗರಾಜ್ ಮತ್ತು ಆರ್ ಪ್ರಸನ್ನ ಕುಮಾರ್ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ನಾಗರಾಜ್ ಅವರಿಗೆ ಬಿ ಫಾರಂ ನೀಡದೆ ಇರುವುದರಿಂದ ಹಾಗೂ ರಾಜ್ಯ ಮಟ್ಟದ ನಾಯಕರ ಸೂಚನೆ ಮೇರೆಗೆ ವೈ.ಹೆಚ್ ನಾಗರಾಜ್ ಇಂದು ನಾಮಪತ್ರ ವಾಪಾಸ್ ಪಡೆಯಲಿದ್ದಾರೆ ಎಂದರು.

ಬಿಜೆಪಿ ಪಕ್ಷದ ಅಭ್ಯರ್ಥಿ ಎಂಎಲ್ ಸಿ ಚುನಾವಣೆ ಗೆಲ್ಲುವುದು ಕಷ್ಟವಿದೆ. ಇನ್ನು 6 ತಿಂಗಳಲ್ಲಿ ಸರ್ಕಾರ ಬಿದ್ದುಹೋಗಲಿದೆ. ಅತಿವೃಷ್ಠಿ ಮತ್ತು ಕೊರೋನ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದರಿಂದ ನಮ್ಮ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್ ಗೆಲುವು ನಿಶ್ಚಿತವೆಂದರು.

ರಾಜ್ಯದ ಉತ್ತಮ ಸಧನೆ ಇದೆ. 25 ಸ್ಥಾನದ ಎಂಎಲ್ ಸಿ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲಲಿದೆ. ಜಿಲ್ಲೆಯಲ್ಲಿ 2 ವರೆ ಸಾವಿರ ಮತಗಳ ಅಂತರದಿಂದ ಆರ್.ಪ್ರಸನ್ನ ಕುಮಾರ್ ಗೆಲ್ಲಲಿದ್ದಾರೆ ಎಂದರು.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here