ಸುದ್ದಿಲೈವ್.ಕಾಂ/ಭದ್ರಾವತಿ

ಹೊಸಮನೆ ಪೊಲೀಸ್ ಠಾಣೆಯ ಪಿಸಿಯೋರ್ವನ ವಿರುದ್ಧ ಮಹಿಳೆಯೋರ್ವರು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

10 ವರ್ಷದಿಂದ ನನ್ನೊಂದಿಗೆ ಮದುವೆ ಇಲ್ಲದೆ ಸಂಸಾರ ನಡೆಸಿ ಈಗ ಮತ್ತೊಂದು ಮಹಿಳೆಯನ್ನ ಮದುವೆಯಾಗುವುದಾಗಿ ಎಂಗೇಜ್ ಮೆಂಟ್ ಮಾಡಿಕೊಂಡು ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಎಫ್ ಐ ಆರ್‌ ದಾಖಲಿಸಿದ್ದಾರೆ.

ಹೊಸಮನೆ ಠಾಣೆಯ ಕೆಲಸ ಮಾಡುವ ಮಕ್ಸದ್ ಖಾನ್ ವಿರುದ್ಧ ಜಯಶ್ರೀ ವೃತ್ತದ ಮೊದಲನೇ ತಿರುವಿನ ನಿವಾಸಿ ಆಯೇಷಾ ಕೌಸರ್ ಎಂಬ ಮಹಿಳೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ.

ಅಬ್ದುಲ್ ಎಂಬುವರೊಂದಿಗೆ ಈ ಮೊದಲು ಇಷ್ಟಪಟ್ಟು ಮದುವೆಯಾಗಿದ್ದ ಆಯೇಷಾನನ್ನ ಒಂದು ವರ್ಷ ಸಂಸಾರ ನಡೆಸಿ ನಂತರ ಆಕೆಯಿಂದ ದೂರವಾಗಿದ್ದನು. ನಂತರ ಹೊಸಮನೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮಕ್ಸದ್ ಆಯೇಷಾರಿಗೆ ಪರಿಚಯವಾಗಿ ದೈಹಿಕ ಸಂಪರ್ಕ ಹೊಂದಿದ್ದು ಗುಟ್ಟಾಗಿ 10 ವರ್ಷ ಸಂಸಾರ ನಡೆಸಿರುವುದಾಗಿ ಆರೋಪಿಸಿದ್ದಾರೆ.

ಆದರೆ ಕಳೆದ ಮೂರು ದಿನಗಳ ಹಿಂದೆ ಮಕ್ಸದ್ ಆಯೇಷಾರವರೊಂದಿಗೆ ಮಾತನಾಡುತ್ತಾ ನೀನು ಬೇರೆ ಹುಡುಗನನ್ನ ಮದುವೆಯಾಗು ನಾನು ಬೇರೆ ಹುಡಿಗಿಯನ್ನ ಮದುವೆಯಾಗುವುದಾಗಿ ಹೇಳಿ ಬೇರೆ ಹುಡಿಗಿಯನ್ನ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಆಯೇಷಾ ಆರೋಪಿಸಿದ್ದಾರೆ.

ಕಳೆದ ಮೂರು ನಾಲ್ಕು ವರ್ಷದ ಹಿಂದೆ ಮೊದಲನೇ ಮದುವೆಯಾಗಿದ್ದ ಅಬ್ದುಲ್ಲಾ ಮತ್ತೆ ಒಟ್ಟಾಗಿ ಸಂಸಾರ ಮಾಡಿಕೊಂಡಿಓಣ ಬಾಬೆಂದು ಕರೆದರೂ ನಾನು ಮಕ್ಸದ್ ನನ್ನ ನಂಬಿ ಹೋಗಿರಲಿಲ್ಲ. ಈಗ ಮಕ್ಸದ್ ನೊಂದಿಗೆ ಮದುವೆ ಮಾಡಿಸಿ ಇಲ್ಲ ಆರೋಪಿತನಿಗೆ ಕಾನೂನು ಕ್ರಮ ಜರುಗಿಸುವಂತೆ ಆಯೇಷಾ ಎಫ್ಐಆರ್‌ ನಲ್ಲಿ ದಾಖಲಿಸಿದ್ದಾರೆ

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here