ಸುದ್ದಿಲೈವ್.ಕಾಂ/ಶಿವಮೊಗ್ಗ

ಸನಾತನ ಹಿಂದೂ ಪರಿಷತ್‌ನಿಂದ ನ.27 ರಂದು ಶ್ರೀ ಕನಕದಾಸರ ಜಯಂತಿ ಮಹೋತ್ಸವ ಆಚರಿಸುತ್ತಿರುವುದಕ್ಕೆ ಮಲೆನಾಡು ಯುವ ಕುರುಬರ ವೇದಿಕೆ ಖಂಡಿಸಿದೆ.

ಶಿವಮೊಗ್ಗದಲ್ಲಿ ಇದೇ ನವೆಂಬರ್ ೨೭ರಂದು ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ಪೂಜ್ಯ ಭಾರತ ಕಾರ್ಯಕ್ರಮದಡಿ ‘ಶ್ರೀ ಕನಕದಾಸ ಜಯಂತಿ ಮಹೋತ್ಸವ’ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹವಾಗಿದ್ದರೂ ಇದನ್ನು ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಡಿ.ಎಸ್. ಅರುಣ್ ಅವರ ಸಂಚಾಲಕತ್ವದಲ್ಲಿ ನಡೆಸುತ್ತಿರುವುದನ್ನು ಮಲೆನಾಡು ಯುವ ಕುರುಬರ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಮುಖಂಡ ಸೋಮು ಸಿ.ಜಿ.ಮಧುಸೂಧನ್ ತಿಳಿಸಿದ್ದಾರೆ.

ಲಶ್ರೀ ಕನಕದಾಸರು ಈ ನಾಡು ಕಂಡ ದಾಸಶ್ರೇಷ್ಠರಲ್ಲಿ ಒಬ್ಬರಾಗಿದ್ದು, ಇವರ ಕೀರ್ತನೆಗಳು, ತತ್ವ-ಚಿಂತನೆಗಳು ಎಲ್ಲವರ್ಗದವರಿಗೂ ತಲುಪಬೇಕು. ಆದರೆ, ಇಷ್ಟು ವರ್ಷಗಳಿಂದ ಸನಾತನ ಹಿಂದೂ ಪರಿಷತ್‌ನವರಿಗೆ ನೆನಪಾಗದ ಶ್ರೀ ಕನಕದಾಸರು ಇದೀಗ ಏಕಾಏಕಿ ನೆನಪಾಗಿದ್ದು, ಅವರ ಹೆಸರ ಚಿಂತನೆಗಳು ಎಲ್ಲರಿಗೂ ತಲುಪಬೇಕು ಎಂದು ಹೇಳುತ್ತಾ, ಕನಕದಾಸರ ಜಯಂತಿಯ ಹೆಸರಲ್ಲಿ ಪರಿಷತ್ ಚುನಾವಣಾ ಅಭ್ಯರ್ಥಿ ಪರ ಮತಯಾಚನೆ ಮಾಡುವ ಉದ್ದೇಶ ಇದರಲ್ಲಿ ಅಡಗಿದೆ ಎಂದರೆ ತಪ್ಪಾಗಲಾರದು.

ಸನಾತನ ಹಿಂದೂ ಪರಿಷತ್‌ಗೆ ನಿಜವಾಗಿಯೂ ಕನಕದಾಸರ ಚಿಂತನೆಗಳನ್ನು ನಾಡಿನ ಜನತೆಗೆ ತಲುಪಿಸುವ ಉದ್ದೇಶವೇ ಇದ್ದರೆ ಚುನಾವಣೆ ನಂತರವೂ ಮಾಡಬಹುದು. ಆದರೆ, ಚುನಾವಣೆಯನ್ನೇ ಗುರಿಯನ್ನಾಗಿಸಿಕೊಂಡಿರುವ ಸನಾತನ ಹಿಂದೂ ಪರಿಷತ್, ತಮ್ಮ ಸ್ವಾರ್ಥಕ್ಕಾಗಿ ಶ್ರೀ ಕನಕದಾಸರ ಹೆಸರನ್ನು ಬಳಸಿಕೊಳ್ಳುತ್ತಿದೆ. ಅಲ್ಲದೆ, ಈ ಕಾರ್ಯಕ್ರಮಕ್ಕೆ ವಿವಿಧ ಸಮುದಾಯಗಳ ಮಠಾಧೀಶರುಗಳನ್ನು ಆಹ್ವಾನಿಸಿದೆ.

ಆಹ್ವಾನ ಪತ್ರಿಕೆಯನ್ನು ಗಮನಿಸಿದರೆ, ಈ ಕಾರ್ಯಕ್ರಮ ಕೇವಲ ಒಂದು ಪಕ್ಷಕ್ಕೆ ಸೀಮಿತವಾದಂತೆ ಕಾಣುತ್ತಿದೆ. ನಿಜಕ್ಕೂ ಕನಕದಾಸರ ಬಗ್ಗೆ ಕಳಕಳಿ ಇದ್ದಿದ್ದೇ ಆದರೆ, ಇದೇ ಸಮುದಾಯಕ್ಕೆ ಸೇರಿರುವ ಕುರುಬ ಸಮುದಾಯದ ಮುಖಂಡರಾದ ಆರ್. ಪ್ರಸನ್ನಕುಮಾರ್ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಆದರೆ, ಇವರ ಉದ್ದೇಶ ಮತ್ತು ಹುನ್ನಾರಗಳು ಚುನಾವಣೆಯನ್ನೇ ಕೇಂದ್ರೀಕರಿಸಿಕೊAಡAತಿದೆ.
ಆದ್ದರಿAದ ಸನಾತನ ಹಿಂದೂ ಪರಿಷತ್ ಶ್ರೀ ಕನಕದಾಸರ ಚಿಂತನೆಗಳನ್ನು ಚುನಾವಣೆಯ ನಂತರ ಕಾರ್ಯಕ್ರಮ ನಡೆಸುವ ಮೂಲಕ ಜನತೆಗೆ ಪಸರಿಸಲಿ. ನವೆಂಬರ್ ೨೭ರಂದು ಆಯೋಜಿಸಿರುವ ಕಾರ್ಯಕ್ರಮವನ್ನು ರದ್ದುಪಡಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

ಕೇವಲ ವೋಟ್‌ಬ್ಯಾಂಕ್‌ಗಾಗಿ ಶ್ರೀ ಕನಕದಾಸರನ್ನು ಬಳಸಿಕೊಳ್ಳುತ್ತಿರುವುದನ್ನು ಮಲೆನಾಡು ಯುವ ಕುರುಬರ ವೇದಿಕೆ ಖಂಡಿಸುತ್ತದೆ ಎಂದು ವೇದಿಕೆಯ ಅಧ್ಯಕ್ಷ ಸೋಮು, ಪ್ರಧಾನ ಕಾರ್ಯದರ್ಶಿ ಸಿ.ಜಿ. ಮಧುಸುದನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here