ಸುದ್ದಿಲೈವ್.ಕಾಂ/ಶಿವಮೊಗ್ಗ

ಬಂಗಾರದ‌ ಬೆಳೆ ಬೆಳೆದಿದ್ದ ಕೃಷಿ ಇಲಾಖೆ ಜೆಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲನೇ ಅಪರ ಜಿಲ್ಲಾ ಸತ್ರ‌ನ್ಯಾಯಾಲಯ ಆರೋಪಿತ ರುದ್ರೇಶಪ್ಪನವರಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

ಗದಗ ಜಿಲ್ಲೆಯ ಕೃಷಿ ಇಲಾಖೆಯ ಜೆಡಿ ರುದ್ರೇಶಪ್ಪನವರ ಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನ, ಚಿನ್ನದ ಆಭರಣ, ಲಕ್ಷಾಂತರ ರೂ ನಗದು, ಶಿವಮೊಗ್ಗದಲ್ಲಿ ಎರಡು ಮನೆ, ನಾಲ್ಕು ಸೈಟು ಪತ್ತೆಯಾದ ಹಿನ್ನಲೆಯಲ್ಲಿ ಅವರನ್ನ ಎಸಿಬಿ ವಶಕ್ಕೆ ಪಡೆದಿತ್ತು.

ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ, ಆಸ್ತಿ ಗಳಿಕೆಯ ಹಿನ್ನಲೆಯಲ್ಲಿ ಬ್ಯಾಂಕ್ ನ ಬ್ಯಾಲೆನ್ಸ್, ಲಾಕರ್ ಗಳನ್ನ ಇಂದು ತಪಾಸಣೆ ನಡೆಸಲಾಗಿತ್ತು. ಸಂಜೆ 7 ಗಂಟೆಯ ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.

ಹಾಜರು ಪಡಿಸಿದ ರುದ್ರೇಶಪ್ಪನವರಿಗೆ ಮೊದಲನೇ ಅಪರ ಜಿಲ್ಲಾ ಸತ್ರ‌ನ್ಯಾಯಾಲಯದ ನ್ಯಾಯಮೂರ್ತಿಗಳು ಡಿ.7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶಿಸಿದ್ದಾರೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here