ಸುದ್ದಿಲೈವ್.ಕಾಂ/ಶಿವಮೊಗ್ಗ

ಎಸಿಬಿ ಬಲೆಗೆ ಬಿದ್ದ ಗದಗಿನ ಕೃಷಿ ಇಲಾಖೆ ಜೆಡಿ ರುದ್ರೇಶಪ್ಪನವರ ಆದಾಯಕ್ಕಿಂತ ಶೇ.400 ರಷ್ಟು ಹೆಚ್ಚಳದ ಆಸ್ತಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ರುದ್ರೇಶಪ್ಪನವರ ತನಿಖೆಯಲ್ಲಿ 6 ಕೋಟಿ 65 ಲಕ್ಷದ 3 ಸಾವಿರದ ಏಳನೂರ ಎಂಬತ್ತೆರಡು ರೂ ಮೌಲ್ಯದ ಚಿನ್ನದ ಒಡವೆಗಳು, ನಗದು, ನಿವೇಶನ ಕಟ್ಟಡ, ಗೃಹ ಉಪಯೋಗಿ ವಸ್ತುಗಳುಭೂಮಿ ಬ್ಯಾಂಕ್ ಠೇವಣಿ ಇತ್ಯಾದಿ ದೊರೆತಿದೆ.

ಈ ಎಲ್ಲಾ ಆಸ್ತಿಗಳಿಕೆಯನ್ನ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಶೇ.400 ರಷ್ಟು ಹೆಚ್ಚಿನ ಆಸ್ತಿ ಹೊಂದಿರುವುದು ಕಂಡು ಬಂದಿದೆ. ಹಾಗಾಗಿ ಹೆಚ್ಚಿನ ವಿವರಣೆ ಅಗತ್ಯವಿರುವುದಾಗಿ ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ

ಬ್ಯಾಂಕ್ ಲಾಕರ್, ಠೇವಣಿ ಹಾಗೂ ಖಾತೆಗಳ ಬಗ್ಗೆ ಈಗಾಗಲೇ ರುದ್ರೇಶಪ್ಪನವರನ್ನ ಬ್ಯಾಂಕ್ ಗೆ ಕರೆದುಕೊಂಡು ಹೋಗಿರುವ ಎಸಿಬಿ ಅಧೀಕಾರಿಗಳು ಆರೋಪಿತ ಅಧಿಕಾರಿಯನ್ನ ನ್ಯಾಯಾಲಯಕ್ಕೆ ಹಾಜರಿ ಪಡಿಸಲಿದೆ. ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಳಪಡಿಸಲಿದೆಯಾ ಅಥವ ಜಾಮೀನು ಮೇಲೆ ಬಿಡುಗಡೆ ಮಾಡಲಿದೆಯಾ ಕಾದು ನೋಡಬೇಕಿದೆ

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here