ಸುದ್ದಿಲೈವ್.ಕಾಂ/ಶಿವಮೊಗ್ಗ

ನಿನ್ನೆ ಬಂಗಾರದ ಬೆಳೆ ಬೆಳೆದ ಕೃಷಿ ಇಲಾಖೆಯ ಜೆಡಿ ರುದ್ರೇಶಪ್ಪನವರನ್ನ ವಶಕ್ಕೆ ಪಡೆದ ಎಸಿಬಿ ತಂಡ ಇಂದು ತನ್ನ ವಿಚಾರಣೆಯನ್ನ ಮುಂದುವರೆಸಿದೆ. ಇಂದು ಮಧ್ಯಾಹ್ನದ ನಂತರ ಗೋಪಾಳ ಗೌಡ‌ಬಡಾವಣೆಯ ಎಸ್ ಬಿಐ ಬ್ಯಾಂಕ್ ಗೆ ಕರೆತಂದು ಅವರ ಬ್ಯಾಂಕ ಖಾತೆ ಪರಿಶೀಲಿಸಲಾಗುತ್ತಿದೆ.

ನಿನ್ನೆ ಕೋಟಿ ಕೋಟಿ ಬಂಗಾರ, ಒಡವೆ ವಜ್ರ, ನಗದು ಪತ್ತೆಯಾಗಿದ್ದ ಕೃಷಿ ಇಲಾಖೆಯ ರುದ್ರೇಶಪ್ಪನವರ ಮನೆಯಲ್ಲಿ ಇಂದು ಎಸಿಬಿ ತನ್ನ ವಿಚಾರಣೆ ಮುಂದುವರೆಸಿದೆ.‌ ಎಸಿಬಿ ವಶಕ್ಕೆ ಪಡೆದಿದ್ದ ರುದ್ರೇಶಪ್ಪ ನಿನ್ನೆ ಭ್ರಷ್ಠಾಚಾರದ ಕಚೇರಿಯಲ್ಲಿಯೇ ರಾತ್ರಿ ಕಳೆದಿರುವುದಾಗಿ ಮಾಹಿತಿ ತಿಳಿದುಬಂದಿದೆ.

ಇಂದು ಬೆಳಿಗ್ಗೆ ಎಸಿಬಿ ಎಸ್ಪಿ ಜಗದೀಶ್ ಅವರ ನೇತೃತ್ವದಲ್ಲಿ ವಿಚಾರಣೆನಡೆಸಿ ಮಧ್ಯಾಹ್ನ 12 ಗಂಟೆಯ ನಂತರ ಎಸ್ ಬಿಐ ಬ್ಯಾಂಕ್ ಗೆ ಕರೆದುಕೊಂಡು ಬರಲಾಗಿದ್ದುಎಸ್ ಬಿ‌ಐ ಬ್ರಾಂಚ್ ಮ್ಯಾನೇಜರ್ ಛೇಂಬರ್ ನಲ್ಲಿ ಡಿವೈಎಸ್ಪಿ ಲೋಕೇಶ್ ಜೊತೆ ಮಾತುಕತೆ ನಡೆಸಲಾಗುತ್ತಿದೆ.

ಬ್ಯಾಂಕ್ ಲಾಕರ್ ಪರಿಶೀಲಿಸಿದ ಎಸಿಬಿ ಬ್ಯಾಂಕ್ ನಲ್ಲಿ ಯಾವುದೇ ಹಣ, ಬಂಗಾರ ಮೊದಲಾದ ಬೆಲೆ ಬಳುವ ವಸ್ತು ಪತ್ತೆಯಾಗಿಲ್ಲವೆಂದು ತಿಳಿದು ಬಂದಿದೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here