ಸುದ್ದಿಲೈವ್.ಕಾಂ/ಶಿವಮೊಗ್ಗ

ಸುಮಾರು 4 ಕೋಟಿ ಚೀಟಿ ಹಣ ಪೆಂಗನಾಮ ಹಾಕಿರುವ ಆರೋಪದ ಹಿನ್ನಲೆಯಲ್ಲಿ ಇಂದು ಚೀಟಿ ಹಣ ಕಟ್ಟುತ್ತಿದ್ದ ಸುಮಾರು 50 ಜನರು ಆರೋಪಿತರನ್ಮ ಹಿಡಿದು ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಗುಡ್ ಲಕ್ ನಿವಾಸಿಗಳಾದ ಗೀತಾ, ಪುತ್ರ ಸುರೇಶ್, ಕಾಳಮ್ಮ ಸೇರೆ ಒಂದೇ ಕುಟುಂಬದ 7 ಜನರು ಈ ಚೀಟಿ ವ್ಯವಹಾರ ನಡೆಸುತ್ತಿದ್ದು ಆರೋಪಿಸಿದ್ದು. ಇವರ ಬಳಿ ಸುಮಾರು 5 ವರ್ಷದಿಂದ ಹಣ ಕಟ್ಟುತ್ತಿದ್ದ ಹರಿಗೆ ನಿವಾಸಿಗಳು, ವಿನೋಬ ನಗರದ ಮಹಿಳೆಯರು ಅವ್ಯವಹಾರ ನಡೆಸಿರುವುದಾಗಿ ಆರೋಪಿಸಿದ್ದಾರೆ.

ಅಖಿಲ ಭಾರತೀಯ ದಲಿತ ಕ್ರಿಯಾ ಸಮಿತಿವತಿಯ ಸಹಾಯದಿಂದ ಮಹಿಳೆರೆಲ್ಲಾ ಸೇರಿ ಆರೋಪಿತ ಈ 7 ಜನರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಚೀಟಿ ಹಣವನ್ನ ಚೀಟಿದಾರರಿಗೆ ನೀಡದೆ ಮೋಸ ಮಾಡಿರುವುದಾಗಿ ಆರೋಪಿಸಿರುವ ಮಹಿಳೆಯರು, ಕಳೆದ ಒಂದು ವರ್ಷದಿಂದ ಮನೆ ಮಾರಿ ಹಣ ನೀಡುವುದಾಗಿ ಆರೋಪಿತರು ತಿಳಿಸಿದ್ದರು. ಈಗ ಚೀಟಿನೇ ನಡೆಸುತ್ತಿಲ್ಲ ನಾನ್ಯಾಕೆ ನಿಮಗೆ ಹಣ ನೀಡಬೇಕೆಂದು ಚೀಟಿದಾಋಇಗೆ ಆರೋಪಿತರು ಮರು ಪ್ರಶ್ನಿಸುತ್ತಿದ್ದಾರೆ ಎಂದು ಮಹಿಳೆಯರು ತಿಳಿಸಿದ್ದಾರೆ.

ಲೀಲಾವತಿ ಬಾಯಿಯಿಂದ 6 ಲಕ್ಷ ಚೀಟಿ ಹಣ, ಕಸ್ತೂರಿ ಬಾಯಿಯಿಂದ ಸುಮಾರು 50 ಲಕ್ಷ ಹಣ, ಭಾಗ್ಯಮ್ಮರಿಂದ 24 ಲಕ್ಷ, ಕರಿಯಣ್ಣ ಬಿಲ್ಡಿಂಗ್ ನಿವಾಸಿ ನಳೀನಿ, ಪಾರ್ವತಿ, ಜಯಂತ್ ಸೇರಿ 13 ಲಕ್ಷ ಹಣ, ಮೇಘನಾರಿಂದ 35 ಲಕ್ಷ ಹಣ ಸೇರಿ 300 ಜನರಿಗೆ ಪೆಂಗನಾಮ ಹಾಕಿರುವುದಾಗಿ ಚೀಟಿ ಕಟ್ಟುವ ಮಹಿಳೆಯರು ಆರೋಪಿಸಿದ್ದಾರೆ.

ಇವರಿಗೆ ಬೆಂಬಲಿತರಾಗಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಭಗವಾನ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here