ಸುದ್ದಿಲೈವ್.ಕಾಂ/ಶಿವಮೊಗ್ಗ

ಅದ್ದೂರಿ ಕಟೌಟ್, ಕಿಚ್ಚ ಸುದೀಪ್ ನ ಅಭಿಮಾನಿಗಳ ಬ್ಯಾನರ್ ಗಳು ಹೆಚ್ ಪಿ ಸಿ ಚಲನ ಚಿತ್ರ ಮಂದಿರದ ಹೊರಗಡೆ ರಾರಾಜಿಸುತ್ತಿದ್ದರು. ಯಾವುದೇ ಸ್ಟಾರ್ ನಟರ ಸಿನಿಮಾ ಬಿಡುಗಡೆ ಆದಾಗ ಮೊದಲನೇ ದಿನ ನಡೆಯಬೇಕಿದ್ದ ಫ್ಯಾನ್ಸ್ ಶೋ ಇಂದು ನಡೆಯಲಿಲ್ಲ. ಕಾರಣ ಫ್ಯಾನ್ಸ್ ಶೋಗೆ ಅನುಮತಿ ಸಿಕ್ಕಿಲ್ಲ

ಆದರೆ ಬೆಳಿಗ್ಗೆ 9 ಗಂಟೆಯಿಂದ ಮೊದಲನೇ ಶೋ ಆರಂಭವಾಗುತ್ತಿದೆ. ಸುದೀಪ್ಮೂ ನಟನೆಯ ಕೋಟಿಗೊಬ್ಬ-3 ಸಿನಿಮಾಕ್ಕೆ ಹೆಚ.ಪಿಸಿ ಚಲನಚಿತ್ರ ಮಂದಿರದಲ್ಲಿ 3 ಶೋಗಳು  ಬುಕಿಂಗ್ ಆಗಿದೆ ಎಂಬ ಮಾಹಿತಿ ಅಭಿಮಾನಿಗಳಿಂದ ಕೇಳಿಬಂದಿದೆ.

ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಫ್ಯಾನ್ಸ್, ಕಿಚ್ಚನ ಹುಡುಗರು, ಕಿಚ್ಚನ ಅಡ್ಡ ಶಿವಮೊಗ್ಗ, ಕರ್ನಾಟಕ ಕಿಚ್ಚ ಸುದೀಪ್ ಫ್ಯಾನ್ಸ್ ಅಕಾಡೆಮಿ, ಜೈ ಆಂಜನೇಯ ಗೆಳೆಯರ ಬಳಗ, ಕಿಚ್ಚನ ಗೂಡು ಸೇವಾ ಸಮಿತಿ,

ಜಿಲ್ಲಾ ಆಲ್ ಇಂಡಿಯಾ ಬಾದ್ ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಷಿಯೇಷನ್ ಗಳು ಕಣ್ಣಿಗೆ ರಾಚುವ ಹಾಗೆ ಹಾಕಿದರೂ ಬೆಳಿಗ್ಗೆ 6 ಗಂಟೆಗೆ ಕೆಲ ಅಭಿಮಾನಿಗಳು ಚಲನ ಚಿತ್ರ ಮಂದಿರದ ಬಳಿ ಜಮಾವಣೆಗೊಂಡಿದ್ದಾರೆ.

ರಾಕ್ ಲೈನ್ ವೆಂಕಟೇಶ್ ಅರ್ಪಿಸುವ, ಕೋಟಿಗೊಬ್ಬ -3 ಚಲನಚಿತ್ರ ಮಂದಿರದಲ್ಲಿ ಬೆಳಿಗ್ಗೆ 9 ಗಂಟೆಗೆ ಮೊದಲನ ಪ್ರದರ್ಶನಗೊಳ್ಳಲಿದೆ. ಮ್ಯಾಟ್ನಿ ಮಧ್ಯಾಹ್ನ 1 ಕ್ಕೆ, , ಫಸ್ಟ್ ಶೋ ಸಂಜೆ 5 ಕ್ಕೆ , ಸೆಕೆಂಡ್ ಶೋ ರಾತ್ರಿ 8ಕ್ಕೆ ಆರಂಭಗೊಳ್ಳಲಿದೆ.

ಅದರಂತೆ ದುನಿಯಾ ವಿಜಿ ಅಭಿನಯದ ಸಲಗ ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು ಮಲ್ಲಿಕಾರ್ಜುನ ಚಲನ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಅಲ್ಲೂ ಸಹ ಫ್ಯಾನ್ಸ್ ಶೋ ಇಲ್ಲವಾಗಿದೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here