ಸುದ್ದಿಲೈವ್.ಕಾಂ/ಶಿವಮೊಗ್ಗ

ಸಲಗ ಸಿನಿಮಾ ಬಿಡುಗಡೆಯಾದ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಬಿಗ್ ರೆಸ್ಪಾನ್ಸ್ ದೊರೆತಿದೆ. ದುನಿಯಾ ವಿಜಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಮಲ್ಲಿಕಾರ್ಜುನ ಚಲನಚಿತ್ರ ಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.

ದುನಿಯಾ ವಿಜಿಯ ಚಲಚಿತ್ರ ಸಲಗ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ನಟ ವಿಜಿಯ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಕೈನಲ್ಲಿ ಕರ್ಪೂರ ಹಚ್ಚಿ ಪೂಜೆ ಸಲ್ಲಿಸಿದ್ದಾರೆ.

ನಂತರ ಕಟೌಟ್ ಮುಂದೆ ಹೂವಿನಿಂದ ಸಿನಿಮಾದ ಹೆಸರು ಬಿಡಿಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಬೆಳಿಗ್ಗೆ 11 ಗಂಟೆಗೆ ಪ್ರದರ್ಶನಗೊಂಡ ಸಲಗ ಸಿನಿಮಾದಲ್ಲಿ ನಟ ವಿಜಿ ಪ್ರವೇಶಗೊಳ್ಳುತ್ತಿದ್ದಂತೆ ಸಿಳ್ಳೆಗಳನ್ನ ಹೊಡೆಯುವ ಮೂಲಕ ಸಂತೋಷ ವ್ಯಕ್ತಪಡಿಸಲಾಯಿತು.

ಕೊರೋನ ಹಿನ್ನಲೆಯಲ್ಲಿ ಚಲನಚಿತ್ರ ಮಂದಿರಗಳು ಕಳೆದ ಎರಡು ವರ್ಷಗಳಿಂದ‌ಬಂದ್ ಆಗಿದ್ದವು. ಸಿನಿಮಾ ರಿಲೀಸ್ ಆಗಿರುವುದಕ್ಕೆ ಅಭಿಮಾನಿಗಳು ಸಂಭ್ರಮದಿಂದ ಚಲನಚಿತ್ರ ಮಂದಿರದ ಕಡೆ ಬಂದಿದ್ದಾರೆ.‌ಸಂತಸ ವ್ಯಕ್ತಪಡಿಸಿದ್ದಾರೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here