ಸುದ್ದಿಲೈವ್.ಕಾಂ/ಶಿವಮೊಗ್ಗ

ಪಂಚಾಯಿತಿಗಳಿಗೆ ಕಾರ್ಯನಿರ್ವಹಣಾಧಿಕಾರಿ ಗ್ರೇಡ್-2, ಪಿಡಿಒ ಸ್ಥಾನಕ್ಕೆ ಕಾರ್ಯದರ್ಶಿಗಳನ್ನ ಪ್ರಭರರನ್ನಾಗಿ ನೇಮಿಸಲಾಗುತ್ತಿದ್ದು, ಇದು ಸರ್ಕಾರದ ಸ್ಪಷ್ಟ ಉಲ್ಲಂಘನೆ ಎಂದು ಸಾಮಾಜಿಕ ಹೋರಾಟಗಾರ ಶಿವಕುಮಾರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸರ್ಕಾರಿ ಪ್ರಧಾನಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಭದ್ರಾವತಿ ತಾಲೂಕಿನ ಅರಳಿಕೊಪ್ಪ, ಕಾರೇಹಳ್ಳಿ, ಮಂಗೋಟೆ, ಕಾಗೆಕೊಡ್ಡಮಗ್ಗಿ, ದೊಡ್ಡೇರಿ, ಸೈದರಕಲ್ಲಹಳ್ಳಿ, ಗುಡುಂಮಘಟ್ಟಗಳಲ್ಲಿ ಪ್ರಭಾರ ಕಾರ್ಯದರ್ಶಿಗಳನ್ನ ನೇಮಿಸಿ ಸರ್ಕಾರದ ಆದೇಶವನ್ನ ಗಾಳಿಗೆ ತೂರಲಾಗಿದೆ. ಕಾರೇಹಳ್ಳಿಯಲ್ಲಿ 12 ವರ್ಷದಿಂದ ಗ್ರೇಡ್-2 ಕಾರ್ಯದರ್ಶಿಗಳು ಒಂದೇ ಕಡೆ ಪ್ರಭಾರವಾಗಿ ಕೆಲಸ ಮಾಡುತ್ತಿದ್ದಾರೆ.

ಇವರುಗಳಿಗೆ ಯಾವುದೇ ತರಬೇತಿ ಪಡೆಯದೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಣಕಾಸಿನ ನಿರ್ವಹಸಿ ಕೆಸಿಎಸ್ಆರ್ ನಿಯಮಾವಳಿ 1957 ರ ಕಾನೂನು ಉಲ್ಲಂಘನೆ ಆಗಿದೆ. ಇದಕ್ಕೆ ಇಒಗಳ ಕರ್ತವ್ಯ ಲೋಪವಾಗಿದೆ. ಸರ್ಕಾರದ ಅನುಮತಿ ಪಡೆಯದೆ, ಪಿಡಿಒ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕಾರ್ಯದರ್ಶಿಗಳನ್ನ ಶೇ.60 ರಿಂದ 70 ರಷ್ಟು ಮೂಲ ಗ್ರಾಮಪಂಚಾಯಿತಿಯಿಂದ ಬೇರೆ ಬೇರೆ ಗ್ರಾಮ ಪಂಚಾಯಿತಿಗಳಿಗೆ ನಿಯೋಜನೆಗೊಂಡಿದ್ದಾರೆ.

ಈ ವಿಷಯವನ್ನ ಸರ್ಕಾರದ ಪ್ರಧಾನಕಾರ್ಯದರ್ಶಿಗಳು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಆದೇಶಗಳಿಗೆ ಬೆಲೆಕೊಡದೆ ನಿರ್ಲಕ್ಷ ವಹಿಸುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಶಿವಕುಮಾರ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here