ಸುದ್ದಿಲೈವ್.ಕಾಂ/ಶಿವಮೊಗ್ಗ

ಕಿಚ್ಚ ಸುದೀಪ ನಟನೆಯ ಕೋಟಿಗೊಬ್ಬ-3 ಇಂದು ಬಿಡುಗಡೆ ಆಗದೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಕೊರೋನ ನಂತರ ದೊಡ್ಡ ಸ್ಟಾರ್ ನಟನ ಸಿನಿಮಾ ಬಿಡುಗಡೆಗೊಳ್ಳದೆ ಅಭಿಮಾನಿಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅ. 14 ರಂದು ರಾಜ್ಯಾದ್ಯಂತ ಕೋಟಿಗೊಬ್ಬ-3 ಚಲನಚಿತ್ರ ಬಿಡುಗಡೆ ಆಗಲಿದೆ ಎಂದು ಬಹನಿರೀಕ್ಷೆಯಲ್ಲಿದ್ದ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ರಾಜ್ಯಾದ್ಯಂತ ಇಂದು ಬಿಡುಗಡೆ ಆಗಬೇಕಿದ್ದ ಸಿನಿಮಾಕ್ಕೆ ಬ್ರೇಕ್ ಬಿದ್ದಿದೆ.

ತಾಂತ್ರಿಕ ತೊಂದರೆಯ ಹಿನ್ನಲೆಯಲ್ಲಿ ಈ ಸಿನಿಮಾ ಬಿಡುಗಡೆಯಾಗದೆ ಸ್ಥಗಿತವಾಗಿದೆ ಎಂದು ಹೇಳಲಾಗುತ್ತಿದೆ. ಆನ್ ಲೈನ್ ನಲ್ಲಿ ಬುಕ್ ಮಾಡಿದ ಪ್ರೇಕ್ಷಕರಿಗೆ ಆನ್ ಲೈನ್ ನಲ್ಲಿಯೇ ಹಣ ವಾಪಾಸಾಗುತ್ತಿದೆ.

ಯಾರು ಚಲನಚಿತ್ರ ಮಂದಿರಕ್ಕೆ ಬಂದು ಟಿಕೇಟ್ ಪಡೆದಿದ್ದಾರೋ ಅವರಿಗೆ ಚಲನಚಿತ್ರ ಮಂದಿರದಲ್ಲಿ ಹಣ ವಾಪಾಸಾಗುತ್ತಿದೆ. ಇಂದು ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗದ ಹೆಚ್ ಪಿ ಸಿ ಚಲನಚಿತ್ರ ಮಂದಿರದಲ್ಲಿ ಕೋಟಿಗೊಬ್ಬ-3 ರಿಲೀಸ್ ಆಗಬೇಕಿತ್ತು.

ಪ್ರೇಕ್ಷಕರೆಲ್ಲಾ ಬೆಳಿಗ್ಗೆ 6 ಗಂಟೆಗೆ ಹೆಚ್ ಪಿ ಸಿ ಚಲನಚಿತ್ರ ಮಂದಿರದ ಬಳಿ ಬಂದು ನೆರದಿದ್ದರು. ಆದರೆ 9 ಗಂಟೆಯಾದರೂ ಪ್ರೇಕ್ಷಕರಿಗೆ ಹೆಚ್ ಪಿಸಿ ಚಲನಚಿತ್ರ ಮಂದಿರದ ಗೇಟ್ ಬಳಿಯೇ ನಿಲ್ಲಿಸಲಾಗಿತ್ತು.

ನಂತರ 11 ಗಂಟೆಗೆ ಪ್ರದರ್ಶನಗೊಳ್ಳಲಾಗಿದೆ ಎಂದು ಹೇಳಲಾಯಿತು. ಈ ವೇಳೆ ಅಭಿಮಾನಿಗಳ ದಂಡೇ ಹರಿದು ಬರಲು ಆರಂಭವಾಯಿತು. ಇತ್ತ ಮಲ್ಲಿಕಾರ್ಜುನ ಚಲನಚಿತ್ರ ಮಂದಿರದಲ್ಲಿ ದುನಿಯಾ ವಿಜಿ ಅಭಿನಯದ ಸಿನಿಮಾ ಸಲಗ ಆರಂಭವಾದರೂ ಕೋಟಿಗೊಬ್ಬ-3 ಪ್ರದರ್ಶನಗೊಳ್ಳಲಿಲ್ಲ.

ನಂತರ ಪೊಲೀಸರ ಸಹಾಯದಿಂದ ಅಭಿಮಾನಿಗಳಿಗೆ ಇಂದು ಸಿನಿಮಾ ರಿಲೀಸ್ ಆಗುವುದಿಲ್ಲ. ಟಿಕೇಟ್ ವಾಪಾಸ್ ಕೊಟ್ಟು ಹಣ ವಾಪಾಸ್ ಪಡೆಯಬಹುದು ಎಂದು ಅನೌನ್ಸ್ ಮೆಂಟ್ ಮಾಡಲಾಯಿತು. ಆದರೆ ಕೆಲ ಅಭಿಮಾನಿಗಳು ಮಲ್ಲಿಕಾರ್ಜುನ ಚಲನಚಿತ್ರ ಮಂದಿರದ ಕಡೆ ಮುಖಮಾಡಿದರೆ ಕೆಲವರು ನಿರಾಶೆಯಿಂದ ವಾಪಾಸಾದರು.

ಸುದೀಪ್ ಅಭಿಮಾನಿಗಳ ಬ್ಯಾನರ್ ಗೆ ಪೂಜೆ

ಕೋಟಿಗೊಬ್ಬ-3 ಸಿನಿಮಾ ಶತಮಾನೋತ್ಸವ ಆಚರಿಸಲಿ ಎಂದು ಕುವೆಂಪು ರಂಗ ಮಂದಿರದ ಬಳಿ ನಾನೂರು ಅಡಿ ಬ್ಯಾನರ್ ಕಟ್ಟಿ ಕಿಚ್ಚ ಸುದೀಪ್ ಅಭಿಮಾನಿಗಳು ಸಂಭ್ರಮಾಚರಿಸಿದರು.

ಬ್ಯಾನರ್ ಗೆ ಪೂಜೆ ಮಾಡಿದ ಅಭಿಮಾನಿಗಳು ಪಟಾಕಿ ಸಿಡಿಸಿದರು.

 

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here