ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗ ನಗರದ ಬೊಮ್ಮನಕಟ್ಟೆ ವಾಸಿಯ ಬಾಲರಾಜ್ ಎಂಬುವವರಿಂದ ಬಾಡಿಗೆಗೆಂದು ಮೂರು ಕಾರುಗಳನ್ನ ಪಡೆದುಕೊಂಡು ಹೋದ ವ್ಯಕ್ತಿ ವಾಪಾಸ್ ಕಾರು ಕೊಡದೆ, ಬಾಡಿಗೆಯನ್ನೂ ಕೊಡದೆ ಸತಾಯಿಸಿದ ವ್ಯಕ್ತಿಯನ್ನ ಬಂಧಿಸಿ ಮೂರು ಕಾರುಗಳನ್ನ ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿದ್ಯಾನಗರದ ನಿವಾಸಿ ಅಮೃತ್ ಆಗಾಗ್ಗೆ ದಿನಕ್ಕೆ 1000 ರೂ ಬಾಡಿಗೆಯಂತೆ ಬಾಲರಾಜ್ ಬಳಿ ಕಾರನ್ನ ಪಡೆದು ಬಾಡಿಗೆ ಓಡಿಸುತ್ತಿದ್ದನು. ಬಾಡಿಗೆ ಓಡಿಸುತ್ತಿದ್ದ  ಅಮೃತ್ ಸರಿಯಾದ ಬಾಡಿಗೆ ನೀಡಿ ಕಾರನ್ನ ಜಯನಗರ ಪೊಲೀಸ್ ಠಾಣೆ ಎದುರಿನ ಈದ್ಗಾ ಮೈದಾನದ ಬಳಿ ಬಿಡುತ್ತಿದ್ದನು.

ಆದರೆ ಸೆ.27 ರಂದು ಏರ್ಟೆಲ್ ಕಂಪನಿಯ ಸಿಬ್ಬಂದಿಗಳನ್ನು ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋಗಲು ಕಾರುಗಳು ಬಾಡಿಗೆ ಬೇಕೆಂದು ಮೂರು ಕಾರುಗಳು ಬೇಕೆಂದು ಕೇಳಿದ್ದಾನೆ. ಬಾಲರಾಜ್ ಅವರ ಬಳಿಯಿದ್ದ ಕಾರನ್ನ ರಿಪೇರಿಗೆ ಕೊಟ್ಟಿದ್ದು, ಸ್ನೇಹಿತ ನಾಗೇಶ್ ನಿಂದ ಒಂದು ಕಾರು ಕೊಟ್ಟಿಸಿದ್ದರೆ. ಅಮೃತ್ ಮತ್ತೆ ಮರುದಿನ ಮತ್ತೊಂದು ಕಾರು ಬೇಕೆಂದು ಕೇಳಿದಾಗ ಮತ್ತೊಂದು ಕಾರನ್ನ ಕೊಟ್ಟಿದ್ದಾರೆ.

ಅ.2 ರಂದು ಮತ್ತೊಂದು ಕಾರು ಬೇಕೆಂದು ಕೇಳಿದ ಅಮೃತ್ ಗೆ ಬಾಲರಾಜ್ ಕೇಳಿದ್ದು ಮತ್ತೋರ್ವ ಸ್ನೇಹಿತ ಕೃಷ್ಣಯ್ಯ ಶೆಟ್ಟಿಯಿಂದ ಕಾರು ಕೊಡಿಸಿದ್ದಾರೆ. ಈ ಸಂದರ್ಭದಲ್ಲಿ ಸ್ವಲ್ಪ ಹಣ ನೀಡಿದ್ದಾರೆ. ಆದರೆ ಬಾಡಿಗೆಯನ್ನು ಕೊಡದೆ ಮತ್ತು ಕಾರುಗಳನ್ನು ವಾಪಾಸ್ ನೀಡದೆ ಮೋಸ ಮಾಡಿರುತ್ತಾನೆಂದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಕರಣದ ತನಿಖೆ ಕೈಗೊಂಡು ಪಿಎಸ್ಐ ಜಯನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವು ದಿನಾಂಕ:13-10-2021 ರಂದು ಆರೋಪಿಯನ್ನು ದಸ್ತಗಿರಿ ಮಾಡಿ, ಆರೋಪಿಯಿಂದ ಒಂದು ಹೊಂಡ ಅಮೇಜ್ ಕಾರು ಮತ್ತು ಎರಡು ಟೊಯೋಟಾ ಇಟಿಯೋಸ್ ಕಾರುಗಳು ಸೇರಿ ಒಟ್ಟು ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here