ಸುದ್ದಿಲೈವ್.ಕಾಂ/ಶಿವಮೊಗ್ಗ

ದೇವಸ್ಥಾನದ ಅರ್ಚಕರಿಗೆ ಸಹಾಯ ಮಾಡಲು ಬಿಂದದ್ದ ಅರ್ಚಕರ ಅಳಿಯನಿಗೆ ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಚೇಸ್ ಮಾಡಿ ಹಲ್ಲೆ ನಡೆಸಿರುವ ಘಟನೆ ಎನ್ ಟಿ ರಸ್ತೆಯ ಅಮೃತ್ ರೈಸ್ ಮಿಲ್ ನ ಬಳಿ ನಡೆದಿದ್ದು ಆತನ ಬಳಿ ಇದ್ದ ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ.

ದಸರಾ ಹಬ್ಬದ ಪ್ರಯುಕ್ತ ಹೊಳೆಹೊನ್ನೂರಿನ ಗುರುಮೂರ್ತಯ್ಯ ಎಂಬುವವರು ನಿನ್ನೆ ತನ್ನ ಮಾವ ಪೂಜೆ ಮಾಡುತ್ತಿದ್ದ ಹಳೇ ಮಂಡ್ಲಿಯ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಬೂದಿಸ್ವಾಮಿಯವರಿಗೆ ಪೂಜೆಗೆ ಸಹಾಯ ಮಾಡಿ ವಾಪಾಸ್ ವ್ಯಾಗನರ್ ಕಾರಿನಲ್ಲಿ ವಾಪಾಸ್ ಆಗುತ್ತಿರುವಾಗ ಎನ್ ಟಿ ರಸ್ತೆಯ ಅಮೃತ್ ರೈಸ್ ಮಿಲ್ ಬಳಿ ಅಪರಿಚಿತರಿಬ್ಬರು ಬೈಕ್ ನಲ್ಲಿ ಬಂದು ನಿನ್ನೆ ಬಾರ್ ನಲ್ಲಿ ಯಾಕೆ ಹೊಡೆದೆ ಎಂದು ಹೇಳಿ ಕಾರಿಗೆ ಅಡ್ಡಕಟ್ಟಿದ್ದಾರೆ.

ಅಡ್ಡಕಟ್ಟುತ್ತಿದ್ದಂತೆ ಗುರುಮೂರ್ತಯ್ಯ ಕಲ್ಲೂರು ಪೇಪರ್ ಫ್ಯಾಕ್ಟರಿ ಕಡೆ ತಿರುಗಿಸಿದ್ದಾರೆ. ಅಲ್ಲೂ ಬಿಡದ ಬೈಕ್ ಸವಾರರು ಚೇಸ್ ಮಾಡಿದ್ದಾರೆ. ಅಂಗಡಿಯಲ್ಲಿ ಜನ ಇದ್ದುದ್ದರಿಂದ ಗುರುಮೂರ್ತಯ್ಯ ಕಾರು ನಿಲ್ಲಿಸಿ ಜನರ ಬಳಿ ಓಡಿದ್ದಾರೆ. ಅಷ್ಟರೊಳಗೆ ಚೇಸ್ ಮಾಡಿಕೊಂಡು ಬರುತ್ತಿದ್ದ ಅಪರಿಚಿತ ಬೈಕ್ ಸವಾರರು ಹಲ್ಲೆ ನಡೆಸಿ ಚಾಕು ತೋರಿಸ ಮೊಬೈಲ್ ಕಿತ್ತುಕೊಂಡಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡ ಗುರುಮೂರ್ತಯ್ಯ ಅಲ್ಲೆ ಇದ್ದ ಮಾವ ಬೂದಿಸ್ವಾಮಿ ಮನೆಯೊಳಗೆ ಓಡಿದ್ದಾರೆ.

ಸುಮಾರು ಹೊತ್ತು ಕಿರುಚಾಡಿ ಆ ಬೈಕ್ ಸವಾರರು ತಮ್ಮ ಬೈಕ್ ನ್ನ ಅಲ್ಲೇ ಬಿಟ್ಟು ಹೋಗಿದ್ದಾರೆ. ಆದರೆ ಗುರುಮೂರ್ತಯ್ಯನವರ ಮೊಬೈಲ್ ಕಳುವಾಗಿದೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here