ಸುದ್ದಿಲೈವ್.ಕಾಂ/ಶಿವಮೊಗ್ಗ

ಹಿಂದುತ್ವದ ವಿಚಾರಕ್ಕೆ ಬಂದರೆ ಬಹಳ ಅನುಭವಿಸುತ್ತೀರಾ ಎಂದು ಸಚಿವ‌ ಈಶ್ವರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆದರೆ ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆಯಾದರೂ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಗೃಹಸಚಿವರು ಹಾಗೂ ಸಂಸದರು ಆತನನ್ನ ಭೇಟಿ ಮಾಡದೆ ವೀರಾವೇಷವಾದ ಹೇಳಿಕೆಗೆ ಈ ಘಟನೆ ಸಾಕ್ಷಿ ಆದಂತೆ ಕಾಣುತ್ತದೆ.

ಅ. 7 ರಂದು ಶಿರಾಳಕೊಪ್ಪದಲ್ಲಿ ಯುವಕನೋರ್ವ ತನ್ನ ವಾಟ್ಸಪ್ ಸ್ಟೇಟಸ್ ಗೆ ಚೈತ್ರಾ ಕುಂದಾಪುರ ಅವರ 30 ನಿಮಿಷದ ಭಾಷಣದ ತುಣಕು ಹಾಹಿಕೊಂಡ ಹಿನ್ನಲೆಯಲ್ಲಿ ಆ ಯುವಕನ ಮೇಲೆ ಹಲ್ಲೆ ನಡೆಸಲಾಯಿತು.

ಹಲ್ಲೆ ನಡೆದು ಇವತ್ತಿಗೆ 6 ದಿನ ಕಳೆದಿದೆ. ಕೇವಲ ಆತನ ಮೇಲೆ ನಡೆದ ಹಲ್ಲೆಯನ್ನ ಖಂಡಸುವುದಕ್ಕೆ ಮಾತ್ರ ಈ ಘಟನೆ ಸೀಮಿತವಾದಂತೆ ಕಾಣ್ತಾಇದೆ. ಹಿಂದೂಗಳ ಸುದ್ದಿಗೆ ಬಂದರೆ ಬಹಳ ಅನುಭವಿಸುತ್ತೀರ ಎಂದು ಹೇಳುವ ಮೂಲಕ ಘಟನೆಯನ್ನ ಸಚಿವರು ಖಂಡಿಸಿದ್ದಾರೆ.

ಕೆಲ ಮುಸ್ಲೀಂರು ಅವರೇ ಸಮಾಜದ ಉದ್ಧಾರಕರ ತರಹಬಿಂಬಿಸಿಕೊಳ್ತಾ ಇದ್ದಾರೆ. ಘಟನೆ ನಡೆದಾಗ ನಾನು ಊರಲ್ಲಿ ಇದ್ದೆ. ನನ್ನ ಗಮನಕ್ಕೆ ಬಂದಿಲ್ಲ. ಚೈತ್ರ ಕುಂದಾಪುರ ಅವರ ವಿಡಿಯೋ ನೋಡಿಕೊಂಡು ಯುವಕನ ಮೇಲೆ ಹಲ್ಲೆ ನಡೆಸುತ್ತಾರೆ ಎಂದರೆ‌ ಸೊಕ್ಕಿಷ್ಟರಬೇಕು ಅವನಿಗೆ. ರಾಜ್ಯದಲ್ಲಿ ಈ ವ್ಯವಸ್ಥೆ ನಡೆಯಲ್ಲ. ಇನ್ನು ಮುಂದೆ ಇಂತಹ ಘಟನೆ ನಡೆದರೆ ಬಹಳ ಅನುಭವಿಸುತ್ತೀರ ಎಂದು ಗುಟರ್ ಹಾಕಿದ್ದಾರೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here