ಸುದ್ದಿಲೈವ್.ಕಾಂ/ಶಿವಮೊಗ್ಗ

ದಸರಾ ಉತ್ಸವಕ್ಕೆ ಸಕ್ರೆಬೈಲಿನಿಂದ  2 ಆನೆಗಳು ಶಿವಮೊಗ್ಗಕ್ಕೆ ಬಂದಿವೆ. ಆದರೆ ದಸರಾ ಉತ್ಸವಕ್ಕೆ ನಡೆಯುವ ಮೆರವಣಿಗೆಯಲ್ಲಿ ಆನೆಗಳು ಪಾಲ್ಗೊಳ್ಳುತ್ತಿವೆಯೋ ಹಾಗೂ ಹಾಗೆ ಪೂಜೆ ಮಾಡಿವಾಪಾಸ್ ಕಳುಹಿಸಲಾಗುವುದೊ ಎಂಬ ಪ್ರಶ್ನೆಗೆ ಯಾರೂ ಸ್ಪಷ್ಟವಾಗಿ ಹೇಳದೆ ಇರುವುದರಿಂದ

ಈ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ. ಈ ಬಗ್ಗೆ ಅರಣ್ಯ ಇಲಾಖೆ ಪಾಲಿಕೆಯಾಗಲಿ ಸ್ಪಷ್ಟಪಡಿಸುತ್ತಿಲ್ಲ. ಅಂಬಾರಿ ಹೋರಲು ಈ ಬಾರಿ ಆನೆಗಳನ್ನ ಬಳಸಿಕೊಳ್ಳುತ್ತಿಲ್ಲ ಎಂಬುದು ಒಂದು ಮೂಲಗಳಿಂದ ತಿಳಿದುಬಂದಿದೆ. ಆನೆಗಳಿಗೆ ಪೂಜೆ ಸಲ್ಲಿಸಿ ವಾಪಾಸ್ ಸಕ್ರೇಬೈಲಿಗೆ ಕಳುಹಿಸಲಾಗುತ್ತದೆ ಎಂಬ ಮಾಹಿತಿ ಹರಿದಾಡುತ್ತಿದೆ.

ಆದರೆ ಕೊನೆ ಕ್ಷಣದಲ್ಲಿ ಅಂಬಾರಿ ಹೋರಿಸಿದರೂ ಅಚ್ಚರಿಪಡುವಂತಿಲ್ಲ. ಆದರೆ ಎರಡೇ ಆನೆ ಕರೆಯಿಸಿರುವುದು ಅಂಬಾರಿ ಹೋರುವುದತ ಬಗ್ಗೆ ಅನುಮಾನ ಹುಟ್ಟಿಸಿದೆ. ಅಂಬಾರಿ ಹೋರುವಾಗ ಕನಿಷ್ಠ 3 ರಿಂದ 4 ಆನೆಗಳು ಇರಬೇಕು. ಆದರೆ ಸರ್ಕಾರವೇ ದಸರಾ ಹಬ್ಬಕ್ಕೆ 2 ಆನೆಗಳನ್ನ ಬಳಸಿಕೊಳ್ಳಲು ಸೂಚಿಸಿರುವುದು ಈ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ.

ವಿಜಯ ದಶಮಿಗೆ ಇನ್ನೂ ಎರಡು ದಿನಗಳು ಇರುವಾಗಲೆ ಇಂದು ಸಂಜೆ ಭಾನುಮತಿ ಹಾಗೂ ಸಾಗರ್ ಸಕ್ರೆಬೈಲಿನಿಂದ ನಡೆಸಿಕೊಂಡು ಕರೆತರಲಾಗಿದೆ. ಸಂಜೆಯ ನಂತರ ಆನೆಗಳಿಗೆ ಪೂಜೆ ಮಾಡಲಾಯಿತು. ಮೂರು ದಿನ ಕೋಟೆ ವಾಸವಿ ಶಾಲೆಯಲ್ಲಿ ಆನೆಗಳಿಗೆ ಆಶ್ರಯ ನೀಡಲಾಗಿದೆ. ಎರಡು ಆನೆಗಳನ್ನ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಪಾಲಿಕೆಯ ಎಲ್ಲಾ ಸದಸ್ಯರು ಸದಸ್ಯರೆಲ್ಲರೂ ಉಪಸ್ಥಿತರಿದ್ದರು.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here