ಸುದ್ದಿಲೈವ್.ಕಾಂ/ತೀರ್ಥಹಳ್ಳಿ

ಆಸ್ತಿ ವಿಚಾರದಲ್ಲಿಮನಸ್ಥಾಪ ಮಾಡಿಕೊಂಡ ವ್ಯಕ್ತಿ ಬೈಕ್ ನಲ್ಲಿ ಸಾಗುವಾಗ ಮಾರ್ಗ ಮಧ್ಯೆ ವಾಹನ ನಿಲ್ಲಿಸಿ ಸೀಮೆಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ತೀರ್ಥಹಳ್ಳಿಯಲ್ಲಿ ನಡೆದಿದೆ.

ತಾಲೂಕಿನ ಅಕ್ಲಾಪುರದ ವಾಸಿ ರಾಘವೇಂದ್ರ (40) ಎಂಬಾತ ಆತ್ಮಹತ್ಯೆಗೆ ಶರಾಣದ‌ವ್ಯಕ್ತಿಯಾಗಿದ್ದಾನೆ.‌

ಅಕ್ಲಾಪುರದ ಮನೆಯಿಂದ ದತ್ತರಾಜಪುರ ಮಾರ್ಗದಲ್ಲಿ ಹೋಗುವಾಗ ಬೈಕ್ ನಿಲ್ಲಿಸಿದ ರಾಘವೇಂದ್ರ ಸೀಮೆಎಣ್ಣೆ ಕೊಂಡೊಯ್ದು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆಯಲ್ಲಿ ಆಸ್ತಿವ್ಯಾಜ್ಯದ ವೈಯಕ್ತಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.ಮೃತ ವ್ಯಕ್ತಿ ಪತ್ನಿ,ಎರಡು ಮಕ್ಕಳನ್ನು ಅಗಲಿದ್ದು, ಈ ಘಟನೆ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here