ಸುದ್ದಿಲೈವ್.ಕಾಂ/ಶಿವಮೊಗ್ಗ

ಹೆಬ್ಬೆಟ್ಟು ಮಂಜನ ಹೆಸರಿನಲ್ಲಿ ಕಾರ್ಪೆಂಟರ್ ರೋರ್ವರಿಗೆ ಬೆದರಿಕೆ ಕರೆ ಬಂದಿದ್ದು 5 ಲಕ್ಷ ರೂ ಬೇಡಿಕೆ ಇಟ್ಟಿದ್ದಾನೆ. ಈ ಕರೆಗಳು ನಿರಂತರವಾಗಿ ಬಂದ ಹಿನ್ನಲೆಯಲ್ಲಿ ಕಾರ್ಪೆಂಟರ್ ಸಿಇಎನ್ ಠಾಣೆ ಮೆಟ್ಟಿಲೇರಿದ್ದಾರೆ.

ಕಾರ್ಪೆಂಟರ್ ಮೊಬೆಲ್ ಗೆ ಅಪರಿಚಿತ ನಂಬರ್ ನಿಂದ ಕರೆ ಮಾಡಿ ನಾನು ಹೆಬ್ಬೆಟ್ಟು ಮಂಜ 5 ಲಕ್ಷ ಹಣಕೊಡು ಎಂದು ಬೇಡಿಕೆ ಇಟ್ಟಿದ್ದಾನೆ. ಬೇಡಿಕೆ ಇಟ್ಟಿದ್ದಕ್ಕೆ ಇಲ್ಲ ನನ್ನ ಬಳಿ ಹಣವಿಲ್ಲವೆಂದು ಕಾರ್ಪೆಂಟರ್ ಹೇಳಿದ್ದಕ್ಕೆ ನನ್ನ ಬಳಿ ನಿನ್ನ ನಂಬರ್ ಬಂದಿದೆ ಎಂದರೆ ತಿಳಿದುಕೊ, ನನ್ನ ಹುಡುಗರು ನಿನ್ನ ಮನೆಹತ್ತಿರ ಬರ್ತಾರೆ

ನಾನು ಏನು ಅಂತ ನಿನಗೆ ಒಂದು ಸ್ಯಾಂಪಲ್ ತೋರಿಸುತ್ತೇನೆಂದು ಎಂದು ಮಂಜನ ಹೆಸರಿನಲ್ಲಿ ಬೆದರಿಕೆವೊಡ್ಡಲಾಗಿದೆ. ಇದರಿಂದ ಭಯಭೀತರಾದ ಕಾರ್ಪೆಂಟರ್ ಬೆದರಿಕೆವೊಡ್ಡಿದ್ದವರ ಬ್ಯಾಂಕ್ ಅಕೌಂಟ್ ಗೆ 50 ಸಾವಿರ ರೂ ಹಣ ತುಂಬಿದ್ದಾರೆ.

ಈ ಕರೆ ಜುಲೈ 14 ರಂದು ಬಂದಿದ್ದು ಅ.8 ರವರೆಗೆ ಫೊನು ಮತ್ತು ಮೆಸೇಜ್ ಮಾಡಿ ಹೆಬ್ಬಟ್ಟು ಮಂಜನ ಹೆಸರಿನಲ್ಲಿ ನಿರಂತರವಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕಾರ್ಪೆಂಟರ್ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here