ಸುದ್ದಿಲೈವ್.ಕಾಂ/ಶಿವಮೊಗ್ಗ

ನಿನ್ನೆ ಜಿಲ್ಲೆಯಲ್ಲಿ 21 ಕೊರೋನ ಪಾಸಿಟಿವ್ ಪತ್ತೆಯಾಗಿದ್ದರೆ, ಇಂದು 09 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಂದು ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ಇದರಿಂದ ಸಾವಿನ ಸಂಖ್ಯೆ 1070 ಕ್ಕೆ ಏರಿದೆ.

2923 ಜನರಲ್ಲಿ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 1502 ಜನರಲ್ಲಿ ಕೊರೋನ ನೆಗೆಟಿವ್ ಎಂದು ವರದಿಬಂದಿದೆ.

15 ಜನರನ್ನ ಡಿಸ್ ಚಾರ್ಜ್ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ ಗೆ 00 ಜನರನ್ನ ಇಂದು ಸೇರಿಸಲಾಗಿದ್ದು, 04 ಜನರನ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 62 ಜನ ಪ್ರತ್ಯೇಕವಾಗಿ ಮನೆಯಲ್ಲೇ ಇರಲು ಸೂಚಿಸಲಾಗಿದೆ.

ಒಟ್ಟು ಜಿಲ್ಲೆಯಲ್ಲಿ 84 ಜನರಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ. ಯಾವ ವಿದ್ಯಾರ್ಥಿಗಳಿಗೆ ಹಾಗೂ ಯಾವ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೂ ಪಾಸಿಟ್ ಬಂದಿಲ್ಲ ಎಂದು ಬುಲಿಟಿನ್ ತಿಳಿಸಿವೆ.

ತಾಲೂಕವಾರು ಹೀಗಿದೆ

ಶಿವಮೊಗ್ಗ ತಾಲೂಕಿನಲ್ಲಿ 03 ಜನರಲ್ಲಿ, ಭದ್ರಾವತಿಯಲ್ಲಿ 00, ತೀರ್ಥಹಳ್ಳಿಯಲ್ಲಿ 03, ಶಿಕಾರಿಪುರದಲ್ಲಿ 00, ಸಾಗರದಲ್ಲಿ 01, ಹೊಸನಗರದಲ್ಲಿ 02, ಸೊರಬದಲ್ಲಿ 00, ಹೊರ ಜಿಲ್ಲೆಯಲ್ಲಿ 00 ರಲ್ಲಿ ಪಾಸಿಟಿವ್ ಕಂಡುಬಂದಿದೆ.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here