ಸುದ್ದಿಲೈವ್.ಕಾಂ/ಬೆಂಗಳೂರು

2021 ನೇ ಇಸವಿ ಜನವರಿ ತಾರೀಖು 23 ರಂದು ಜೈನ್(ವಿಶ್ವವಿದ್ಯಾಲಯವೆಂದು
ಪರಿಗಣಿಸಲಾಗಿದೆ) ವಿಶ್ವವಿದ್ಯಾಲಯವು ಮೊದಲನೇ ಬಾರಿ ಅದರಲ್ಲಿ 2020 ನೇ ಇಸವಿಯಲ್ಲಿ
ಪದವಿಧರರಾಗಿರುವ ವಿದ್ಯಾರ್ಥಿಗಳ ಜೊತೆ ವಾರ್ಷಿಕ ಸಮಾವೇಶವನ್ನು ವಾಸ್ತವಿಕವಾಗಿ ನಿರ್ವಹಿಸಿದೆ.

ನಾರಾಯಣ ಹೆಲ್ತ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಮಾನ್ಯ ಡಾ. ದೇವಿ ಪ್ರಸಾದ್ ಶೆಟ್ಟಿ ರವರು ಸದರಿ
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಾ “ನೀವೆಲ್ಲರೂ ನಿಮ್ಮನ್ನು ನೀವೇ ಒಂದು ಬಾರಿ ಪ್ರಶ್ನೆ ಕೇಳಿಕೊಂಡರೆ ಒಳಿತು. ಯಾಕೆಂದರೆ ನಾವು ಈ ಕೆಲಸವನ್ನು ಏಕೆ ಮಾಡುತ್ತಿದ್ದೇವೆ ? ನೀವು ಮುಗಿಸಿದ ಈ ವಿದ್ಯೆಯಿಂದ ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರಿಗೆ
ಸಹಾಯವಾಗಲಿದೆಯಾ ಎಂದು ಪ್ರಶ್ನಿಸಿಕೊಂಡರೆ ನೀವು ನಿಮ್ಮ ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಸೋಲುವುದಿಲ್ಲ ಎಂದರು.

ಡಾ.ಶೆಟ್ಟಿರವರು ಮಾತನಾಡಿ ಯಶಸ್ಸಿಗೆ ಮೊದಲು ಬರುವ ಅಪಯವನ್ನು ಸಹ ವಿದ್ಯಾರ್ಥಿಗಳು ಅರಿಯಬೇಕು, ಯಾಕಂದರೆ ಅವರು ಯಶಸ್ಸಿಯಾಗುವ ಮೊದಲು
ಸುಮಾರು ಅಪಜಯಗಳನ್ನು ಅನುಭವಿಸಿದರು ಸಹ. ಅವರು ವಿದ್ಯಾರ್ಥಿಗಳು ಅವರ ಜೀವನದಲ್ಲಿ
ಯಾವಾಗಲೂ ಗುರಿಯನ್ನು ಬಿಡಬಾರದೆಂದು ಹೇಳಿದರು.

ಜೈನ್(ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ) ವಿಶ್ವವಿದ್ಯಾಲಯದ ಕುಲಪತಿಯಾದ ಮಾನ್ಯ
ಡಾ.ಚೆನ್‍ರಾಜ್ ರಾಯ್‍ಚಂದ್ ರವರು ವಿಶ್ವವಿದ್ಯಾಲಯದ ಹಳೇ ಮತ್ತು ಪದವಿಹೊಂದಲಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡುತ್ತಾ “ಪದವಿಯನ್ನು ಹೊಂದುವುದು ಮತ್ತು ಇಂತಃ ಸಮಾವೇಶಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳ ಜೀವನದಲ್ಲಿ ಪರಿವರ್ತನೆಯ ಮತ್ತು ಚಿನ್ನದಂತ ಕ್ಷಣಗಳು ಎಂದು ಹೇಳಬಹುದು.

ಹಾಜರಿದ್ದ 5098 ವಿದ್ಯಾರ್ಥಿಗಳಲ್ಲಿ, 78 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಮತ್ತು 198
ವಿದ್ಯಾರ್ಥಿಗಳಿಗೆ ಉತ್ತಮ ಶ್ರೇಣಿಯನ್ನು ವಿಶ್ವವಿದ್ಯಾಲಯವು ಮಾನವಿಕತೆ, ಸಾಮಾಜಿಕ, ವಿಜ್ಞಾನ,ವಾಣಿಜ್ಯ, ನಿರ್ವಹಣೆ, ಕಾನೂನು, ವಿದ್ತೆ ಮತ್ತು ತಾಂತ್ರಕ ಶಾಸ್ತ್ರಗಳಲ್ಲಿ ನೀಡಲಾಗಿದೆ.
ನಂತರ, ಉಪಕುಲಪತಿರವರ ಸ್ವಾಗತ ಭಾಷಣ, ಕುಲಪತಿರವರಿಂದ ಪದವಿಗಳ ಹಂಚಿಕೆ,
ಕುಲಪತಿಯವರ ಭಾಷಣೆ ಮತ್ತು ಮುಖ್ಯ ಅತಿಥಿಯವರ ಭಾಷಣೆಗಳು ಸದರಿ ಸಮಾವೇಶದ ವಿಧ್ಯುಕ್ತ ಅಂಶಗಳಾಗಿವೆ.

ಜೈನ್(ವಿಶ್ವವಿದ್ಯಾಲಯವೆಂದು ಪರಿಗಣಿಸಲಾಗಿದೆ) ವಿಶ್ವವಿದ್ಯಾಲಯದ ಕುಲಪತಿಯಾದ ಮಾನ್ಯ
ಡಾ.ಚೆನ್‍ರಾಜ್ ರಾಯ್‍ಚಂದ್ ರವರು ಸದರಿ ಸಂಸ್ಥೆಯ ಉಪ ಕುಲಪತಿ, ರಿಜಿಸ್ಟ್ರಾರ್ ಮತ್ತು
ಇನ್ನಿತರೆ ಅಧಿಕಾರಿಗಳಜೊತೆ ಮೇಲ್ಕಂಡ ಸಮಾವೇಶದಲ್ಲಿ ಹಾಜರಾಗಿದ್ದರು.

Share to this News
  •  
  •  
  •  
  •  
  •  
  •  
  •  
  •  
  •  
  •  

LEAVE A REPLY

Please enter your comment!
Please enter your name here